25.8 C
Bengaluru
Wednesday, January 14, 2026

ಅಧಿಕಾರಿಗಳಿಂದ ಶಿಡ್ಲಘಟ್ಟದ ರೈಲ್ವೇ ಅಂಡರ್‌ಪಾಸ್ ಪರಿಶೀಲನೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿಯ ರಸ್ತೆಯ ರೈಲ್ವೆ ಅಂಡರ್‌ಪಾಸ್ ಬಳಿ ಮಳೆಗಾಲದಲ್ಲಿ ಮಳೆ ನೀರು ಹರಿಯದೆ ಅಲ್ಲೆ ನಿಂತು ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದ್ದ ಹಿನ್ನಲೆಯಲ್ಲಿ ಶಿಡ್ಲಘಟ್ಟ ನಗರಸಭೆ ಅಧಿಕಾರಿಗಳು, ರೈಲ್ವೆ ಇಲಾಖೆ ಇಂಜಿನಿಯರ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿನ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ರೈಲ್ವೆ ಅಂಡರ್‌ಪಾಸ್ ಬಳಿ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಂಡರ್‌ಪಾಸ್ ಬಳಿ ಬೀಳುವ ಮಳೆಯ ಮಳೆ ನೀರು ಹರಿದು ಹೋಗುವ ಮೋರಿಗಳಲ್ಲಿ ಕಸ ಕಡ್ಡಿ ಮಣ್ಣು ಮಸಿ ತುಂಬಿಕೊಂಡ ಕಾರಣ ಮಳೆ ಎಲ್ಲಿಗೂ ಹರಿದುಹೋಗದೆ ಅಲ್ಲಿ ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಈ ಸ್ಥಳಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ರೈಲ್ವೆ ಇಲಾಖೆಯ ಇಂಜಿನಿಯರ್ ಜಯಶೀಲನ್ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳಪರಿಶೀಲನೆ ನಡೆಸಿ ಮುಂದಿನ ವಾರದೊಳಗೆ ಮೋರಿಗಳಲ್ಲಿನ ಕಸ ಕಡ್ಡಿ ತೆಗೆದು ಮಳೆ ನೀರು ಹೋಗಲು ಅನುವು ಮಾಡಿಕೊಡಲಾಗುವುದು, ಜುಲೈ ತಿಂಗಳಲ್ಲಿ ಅಂಡರ್‌ಪಾಸ್‌ನಲ್ಲಿ ಕಿತ್ತುಹೋಗಿರುವ ಡಕ್‌ಗಳನ್ನು ರಿಪೇರಿ, ಡಾಂಬರು ಕೆಲಸ ಮಾಡಲಾಗುವುದು ಎಂದು ರೈಲ್ವೆ ಇಂಜಿನಿಯರ್ ಜಯಶೀಲನ್ ತಿಳಿಸಿದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!