
Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿ ಆಚರಣೆಯನ್ನು ಜೂನ್ 27 ರ ಮಂಗಳವಾರ ಅದ್ದೂರಿಯಾಗಿ ಆಚರಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲ್ಲೂಕಿನ ಹಂಡಿಗನಾಳ ಶ್ರೀ ಕೆಂಪಣ್ಣ ಶ್ರೀ ವೀರಣ್ಣ ಕಲ್ಯಾಣಮಂಟಪದಲ್ಲಿ ಕೆಂಪೇಗೌಡ ಆಚರಣಾ ಸಮಿತಿಯಿ೦ದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗ ಜನಾಂಗದ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ, ಆರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸಲು ತಾವು ಸಂಪೂರ್ಣ ಬೆ೦ಬಲ ನೀಡುವುದಾಗಿ ತಿಳಿಸಿದರು.
ಸಮುದಾಯದ ಬಡವರ ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ ಶಿಕ್ಷಣಕ್ಕೆ ಸಂಘದಿಂದ ಸಹಾಯಧನ ನೀಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂದು ಕೆಲವರು ಸಲಹೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಪಲ್ಲಕ್ಕಿ ಉತ್ಸವದಲ್ಲಿ ತಾಲ್ಲೂಕಿನ ಎಲ್ಲಾ ಕಡೆಗಳಿಂದ ನೂರಾರು ಪಲ್ಲಕ್ಕಿಗಳು ಭಾಗವಹಿಸಿ ಮೆರವಣಿಗೆಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಮೆರವಣಿಗೆಯಲ್ಲಿ ತಾಲ್ಲೂಕಿನ ವಿವಿದೆಡೆಗಳಿಂದ ಪಲ್ಲಕ್ಕಿಗಳನ್ನು ತರುವವರು ಡಿಜೆ ಗಳನ್ನು ಬಳಸಬಾರದು. ಕೋರ್ಟ್ ಆದೇಶ ಹೊರಡಿಸಿರುವುದರಿಂದ ಯಾರೂ ಸಹ ಡಿಜೆಗಳನ್ನು ಆಳವಡಿಸಬಾರದು, ಒಂದು ವೇಳೆ ಅಳವಡಿಸಿಕೊಂಡು ಬಂದಿದ್ದೆ ಅದರೆ ಅದಕ್ಕೆ ಅವರೆ ಹೊಣೆ ಯಾವುದೇ ಕಾರಣಕ್ಕೂ ಆಚರಣಾ ಸಮಿತಿ ಜವಾಬ್ದಾರಿ ಅಲ್ಲ ಎಂದು ಹೇಳಿದರು.
ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸುವ ಜವಾಬ್ದಾರಿಯನ್ನು ಆಚರಣಾ ಸಮಿತಿಗೆ ವಹಿಸಲು ತೀರ್ಮಾನಿಸಲಾಯಿತು.
ಜಯಂತ್ಯುತ್ಸವದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ, ಆರ್ಥಿಕ ಕ್ರೂಡೀಕರಣ, ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಹಾಗೂ ಭಾಗವಹಿಸುವರಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸುವ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.
ಯಾವುದೇ ರೀತಿಯ ಅಚಾತುರ್ಯಗಳು ನಡೆಯದಂತೆ ಶಾಂತಿಯಿಂದ ಸಹೋದರತೆಯಿಂದ ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ಶಿಡ್ಲಘಟ್ಟ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಶಿಡ್ಲಘಟ್ಟ ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪುರುಷೋತ್ತಮ್, ಸಿ.ಎ. ದೇವರಾಜ್, ಮೇಲೂರು ಗ್ರಾ.ಪಂ.ಅಧ್ಯಕ್ಷ ಆರ್.ಎ.ಉಮೇಶ್. ಹಿರೆಬಲ್ಲ ಕೃಷ್ಣಪ್ಪ, ದಿಬ್ಬೂರಹಳ್ಳಿ ಪ್ರಸನ್ನ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಎ.ಎಂ.ತ್ಯಾಗರಾಜ್, ಹಂಡಿಗನಾಳ ಗ್ರಾ.ಪಂ ಅಧ್ಯಕ್ಷ ಮುನಿರೆಡ್ಡಿ, ಎನ್.ಪಿ.ಎಸ್.ಅಧ್ಯಕ್ಷ ಗಜೇಂದ್ರ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಸರ್ಕಾರಿ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಸಿ.ಆರ್.ಪ್ರಕಾಶ್, ಗೊರಮೊಡಗು ರಾಜಣ್ಣ. ಜೆ.ವಿ.ಸುರೇಶ್, ಗೋರಮೋಡಗು ದ್ಯಾವೀರಪ್ಪ, ಎಚ್.ಜಿ.ಗೋಪಾಲಗೌಡ, ಎಚ್.ಕೆ.ಸುರೇಶ್, ರಾಯಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ಅನೂರು ವಿಜಯೇಂದ್ರ, ಎಂ.ಎಸ್.ಸೊಣ್ಣಪರೆಡ್ಡಿ, ಭಕ್ತರಹಳ್ಳಿ ಚಿದಾನಂದ, ಮಳಮಾಚನಹಳ್ಳಿ ರವಿ ಹಾಜರಿದ್ದರು.