19.8 C
Bengaluru
Tuesday, February 17, 2026

ಯಾವುದೇ ಗೊಂದಲ, ಗದ್ದಲವಿಲ್ಲದೆ ಸೌಹಾರ್ಧಯುತವಾಗಿ ಕ್ರಿಸ್ಮಸ್ ಆಚರಿಸಬೇಕು

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ಅವರು ಮಾತನಾಡಿದರು.

ಯಾವುದೇ ಗೊಂದಲ, ಗದ್ದಲವಿಲ್ಲದೆ ಸೌಹಾರ್ಧಯುತವಾಗಿ ಎಲ್ಲಾ ಕ್ರಿಶ್ಚಿಯನ್ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಳ್ಳುವಂತೆ ಅವರು ತಿಳಿಸಿದರು.

ಧರ್ಮಾಚರಣೆ ಭಿನ್ನವಾಗಿರಬಹುದು. ದೇವರ ಆರಾಧನೆ ವಿಭಿನ್ನವಾಗಿರಬಹುದು. ಆದರೆ ನಾವೆಲ್ಲರೂ ಬಯಸುವುದು ಮಾನವ ಕುಲಕದ ಏಳಿಗೆ ಮತ್ತು ಸಮಾಜದ ಶಾಂತಿಯೇ ಆಗಿದೆ. ಕಷ್ಟ, ದುಃಖ, ರೋಗ, ಅಸಮಾನತೆ ಜನರ ಬದುಕಿಗೆ ಮಾರಕವಾಗಿವೆ. ಪರಸ್ಪರ ಅಪನಂಬಿಕೆ, ದ್ವೇಷ, ಸ್ವಾರ್ಥ ನಮ್ಮ ಐಕ್ಯತೆ ಒಡೆದುಹಾಕುತ್ತಿದೆ. ಧರ್ಮದ ಚೌಕಟ್ಟನ್ನು ಮೀರಿ ಸ್ನೇಹ ಸೌಹಾರ್ದತೆಯಿಂದ ಬಾಳುವುದನ್ನು ನಾವು ಕಲಿಯಬೇಕಿದೆ ಎಂದು ಹೇಳಿದರು.

ಶಾಂತಿ ಸಭೆಯಲ್ಲಿ ತಾಲ್ಲೂಕಿನ ವಿವಿಧ ಚರ್ಚೆಗಳ ಪಾದ್ರಿಗಳು ಹಾಗೂ ವ್ಯವಸ್ಥಾಪಕರು ಹಾಜರಿದ್ದರು. ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆ ಚರ್ಚ ಮುಖಂಡರ ಕೋರಿದರು.

ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿರುವ ಹಾಗೂ ನಗರ ಪ್ರದೇಶದಲ್ಲಿ ಇರುವ ಚರ್ಚ್ ಗಳಲ್ಲಿ ನಡೆಯುವ ಪ್ರಾರ್ಥನೆಗಳು ಹಾಗೂ ಮನರಂಜನೆ ಕಾರ್ಯಕ್ರಮಗಳಿಗೆ ಸೂಕ್ತ ಬಂದೋಬಸ್ತ್ ನೀಡುತ್ತೇವೆ. ಯಾವುದೇ ಗಲಭೆಗಳು ಆಗದ ಹಾಗೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಏನಾದರೂ ಆ ತರಹದ ಘಟನೆಗಳ ಸೂಚನೆ ಸಿಕ್ಕರೂ ಹತ್ತಿರದ ಪೊಲೀಸರಿಗೆ ತಿಳಿಸುವಂತೆ ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ತಿಳಿಸಿದರು.

ಶಾಂತಿ ಸಭೆಯಲ್ಲಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್, ಕ್ರೈಂ ಸಬ್ ಇನ್ಸ್ ಪೆಕ್ಟರ್ ಪದ್ಮಾವತಮ್ಮ, ಪೋಲಿಸ್ ಸಿಬ್ಬಂದಿ ಹಾಗೂ ಚರ್ಚಗಳ ಫಾದರ್ ಗಳು, ಮುಖಂಡರು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!