Chikkaballapur : ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿದ್ದು ಹಾಗೂ ದೌರ್ಜನ್ಯ ನಡೆಸಿದ್ದನ್ನು (2023 Manipur violence) ಖಂಡಿಸಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತು ಹಲವು ಸಂಘ ಸಂಸ್ಥೆಗಳು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದವು.
ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತು ಹಳ್ಳಿ ಮಕ್ಕಳ ಸಂಘದ ಸದಸ್ಯರು ಪ್ರತಿಭಟಿಸಿದರು
ಗೌರಿಬಿದನೂರು
![2023 Manipur violence
Gauribidanur](https://chikkaballapur.com/wp-content/uploads/2023/07/26JulGaurinbidanur-1024x683.jpg)
ಗೌರಿಬಿದನೂರು ನಗರದಲ್ಲಿ ಮಂಗಳವಾರ ಸಿಪಿಎಂ ಸಂಘಟನೆ, ದಲಿತ ಸಂಘರ್ಷ ಸಮಿತಿ, ಕ್ರೈಸ್ತ ಸಂಘಟನೆ, ಕಾರ್ಮಿಕ ಮತ್ತು ಮಹಿಳಾ ಸಂಘಟನೆಗಳ ವತಿಯಿಂದ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಾಯಿತು.
ಬಾಗೇಪಲ್ಲಿ
![2023 Manipur violence Bagepalli](https://chikkaballapur.com/wp-content/uploads/2023/07/26JulBagepalli-1024x683.jpg)
ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಘಟನೆ ಖಂಡಿಸಿ ಸಿಪಿಐಎಂ, ಸಿಐಟಿಯು, ರಾಜ್ಯ ಪ್ರಾಂತ ರೈತ ಸಂಘ, ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್, ಡಿವೈಎಫ್ಐ ತಾಲ್ಲೂಕು ಸಮಿತಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.