Chintamani : ಜನವರಿ 9 ಭಾನುವಾರದಂದು ತ್ರೈಮಾಸಿಕ ನಿರ್ವಹಣೆ ಕಾರಣ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಚಿಂತಾಮಣಿ ನಗರದ 220 ಕೆವಿ ಸ್ವೀಕರಣ ಕೇಂದ್ರ ಹಾಗೂ ಅಲ್ಲಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 66/11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.
ಚಿಂತಾಮಣಿ, ತಳಗವಾರ, ನಂದಿಗಾನಹಳ್ಳಿ, ಇರಗಂಪಲ್ಲಿ, ಎಂ. ಗೊಲ್ಲಹಳ್ಳಿ, ಜಿ. ಕೋಡಿಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಏನಿಗದಳೆ, ಶಿಡ್ಲಘಟ್ಟ, ಚೀಮಂಗಲ, ವೈ.ಹುಣಸೇನ ಹಳ್ಳಿ, ಮೇಲೂರು, ಗಂಜಿಗುಂಟೆ, ಪಲ್ಲಿಚೆರ್ಲು, ಶ್ರೀನಿವಾಸಪುರ, ತಾಡಿಗೋಳ್, ಲಕ್ಷ್ಮೀಪುರ, ಗೌನಿಪಲ್ಲಿ, ಅಡ್ಡಗಲ್, ರಾಯಲ್ಪಾಡು, ಸೋಮಯಾಜಲಹಳ್ಳಿ ವಿದ್ಯುತ್ ಸ್ವೀಕಾರ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .