Kaiwara, Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ (AKHIL BHARATIYA SAHITYA PARISHAD KARNATAKA) ವತಿಯಿಂದ ‘ಆದಿಕವಿ ಹಾಗೂ ವಾಗ್ದೇವಿ’ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ (Abhasapa Award) ಆಯೋಜಿಸಲಾಗಿತ್ತು. ವೇ.ಮೂ.ವಿಷ್ಣು ಭಟ್ ಡೋಂಗ್ರೆ ಅವರಿಗೆ ಆದಿಕವಿ ಪುರಸ್ಕಾರ ಹಾಗೂ ಜಿ.ಬಿ.ಹರೀಶ್ ಅವರಿಗೆ ವಾಗ್ದೇವಿ ಪುರಸ್ಕಾರ ಪ್ರಾದಾನ (Adikavi and Vagdevi Puraskara Pradana) ಮಾಡಲಾಯಿತು.
ಕಾರ್ಯಕರ್ಮದಲ್ಲಿ ಮಾತನಾಡಿದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ “ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವಂತೆ ನೋಡಿಕೊಳ್ಳಲು ಧರ್ಮಾಚರಣೆ ಮಾಡುವ ಮಾದರಿ ವ್ಯಕ್ತಿಗಳ ಅಗತ್ಯವಿದೆ. ಸಂಸ್ಕೃತದಿಂದ ಸಾವಿರಾರು ಭಾಷೆಗಳು ಬೆಳೆದವು. ಬೇರೆ ಬೇರೆ ಭಾಷೆಗಳು ಸಾಮಾನ್ಯ ಜನರಿಗೆ ಸುಲಲಿತವಾಗಿ ವಿಚಾರಗಳನ್ನು ತಿಳಿಸುವ ಕಾರಣಕ್ಕಾಗಿ ಜನ್ಮ ತಾಳಿದವು. ಉತ್ತಮ ವಿಚಾರಗಳನ್ನು ಹೆಚ್ಚು ಜನರು ಅರ್ಥೈಸಿಕೊಂಡಾಗ ಸಮಾಜವು ಉತ್ತಮವಾಗುತ್ತದೆ. ಏನೂ ಮಾಡುತ್ತಿಲ್ಲ ಎಂದು ಸಮಾಜದ ಕಡೆಗೆ ಬೆರಳು ತೋರಿಸುವ ಬದಲು ಕೈಲಾದ ಕಾರ್ಯವನ್ನು ಮಾಡುತ್ತಿರಬೇಕು. ಜನರಿಗೆ ಉತ್ತಮ ವಿಚಾರಗಳು ತಲುಪಲಿ ಎಂದು ಕಳೆದ 20-25 ವರ್ಷಗಳಿಂದ 5 ಸಾವಿರ ಭಜನಾ ತಂಡಗಳನ್ನು ಮುನ್ನೆಡೆಸುತ್ತಿರುವುದು ಸಾರ್ಥಕತೆ ಮೂಡಿಸಿದೆ” ಎಂದು ತಿಳಿಸಿದರು.
ಆಕಾಶವಾಣಿಯ ನಿವೃತ್ತ ಅಧಿಕಾರಿ ಹಾಗೂ ಏಕವ್ಯಕ್ತಿ ತಾಳಮದ್ದಳೆ ಪ್ರಕಾರದ ರೂವಾರಿ ದಿವಾಕರ ಹೆಗಡೆ ಕೆರೆಹೊಂಡ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮಾತನಾಡಿದರು. ಪರಿಷತ್ ಖಜಾಂಚಿ ರಾಮಕೃಷ್ಣ ಶ್ರೌತಿ, ಸಹ ಖಜಾಂಚಿ ವಿಜಯ್ ಭರ್ತೂರು, ತುಮಕೂರು ವಿಭಾಗದ ಸಂಯೋಜಕ ಅಶ್ವತ್ಥನಾರಾಯಣ, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ರಂಜನ್ ಉಪಸ್ಥಿತರಿದ್ದರು.