Home Sidlaghatta ಜಾತಿ ಮತ್ತು ಮಹಿಳೆ ಕುರಿತು ಕೀಳಾಗಿ ಮಾತನಾಡಿದವರ ವಿರುದ್ದ ಕ್ರಮವಹಿಸಿ

ಜಾತಿ ಮತ್ತು ಮಹಿಳೆ ಕುರಿತು ಕೀಳಾಗಿ ಮಾತನಾಡಿದವರ ವಿರುದ್ದ ಕ್ರಮವಹಿಸಿ

0
143

Sidlaghatta : ಯಾವುದೆ ಜಾತಿ ಮತ್ತು ಮಹಿಳೆ ಕುರಿತು ಕೀಳಾಗಿ ಮಾತನಾಡುವುದನ್ನು ನಮ್ಮ ಬಿಜೆಪಿ ಪಕ್ಷವು ಯಾವುದೆ ಕಾರಣಕ್ಕೂ ಒಪ್ಪುವುದಿಲ್ಲ. ಅಂತಹ ಸಂಸ್ಕೃತಿವುಳ್ಳ ಯಾರನ್ನೂ ಪಕ್ಷವು ಇಟ್ಟುಕೊಳ್ಳುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಂಬದಹಳ್ಳಿ ಸುರೇಂದ್ರಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನಂ ಅವರು ಜಾತಿಯೊಂದರ ಬಗ್ಗೆ ಮತ್ತು ಮಹಿಳೆಯ ಬಗ್ಗೆ ಕೀಳಾಗಿ ನಿಂದನೆ ಮಾಡಿ ಮಾತನಾಡಿರುವುದು ಅವರಿಗೆ ಅಥವಾ ಇನ್ನಾರಿಗೆ ಆಗಲಿ ಶೋಭೆ ತರುವುದಲ್ಲ. ಅದನ್ನು ನಮ್ಮ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದರು.

ಶಿಸ್ತು ಸಮಿತಿಯು ಕೂಡಲೆ ಮುನಿರತ್ನಂ ವಿರುದ್ದ ಕ್ರಮವಹಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತೆ ಪಕ್ಷದ ವರಿಷ್ಠರನ್ನು ಅವರು ಆಗ್ರಹಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!