ಲೋಕ ಕಲ್ಯಾಣಾರ್ಥಕ್ಕಾಗಿ ವೇದಪಾರಾಯಣ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ರಾಘವೇಂದ್ರಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ವಿಪ್ರ ಪುರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಳಿ ವತಿಯಿಂದ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥಕಾಗಿ ವೇದ ಪಾರಾಯಣ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ವೇದಪಂಡಿತ ರಾಮಮೋಹನಶಾಸ್ತ್ರಿ, “ಅಧಿಕ ಶ್ರಾವಣ ಮಾಸದ ಪ್ರಯುಕ್ತ ನಮ್ಮ ಪುರೋಹಿತರ ತಂಡದ ವತಿಯಿಂದ ಲೋಕ ಕಲ್ಯಾಣರ್ಥವಾಗಿ ವೇದ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜುಲೈ 15 ರಿಂದ ಆಗಸ್ಟ್ 16 ರವರೆಗೆ ಒಂದು ತಿಂಗಳ ಕಾಲ ವೇದ ಪಾರಾಯಣ ಮಾಡುವ ಮೂಲಕ ಲೋಕದಲ್ಲಿ ಅನಾವೃಷ್ಟಿ ನಾಶವಾಗಿ ಉತ್ತಮ ಮಳೆ ಉಂಟಾಗಿ ನಾಡು ಸಕಲ ಸಮೃದ್ಧಿಯಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ” ಎಂದರು.

ಕಾರ್ಯಕ್ರಮದಲ್ಲಿ ವೈ.ಎನ್. ದಾಶರಥಿ, ಕೆ.ಎಸ್.ಮಂಜುನಾಥ್, ರಾಘವೇಂದ್ರ, ಎಸ್.ವಿ.ವೆಂಕಟೇಶಮೂರ್ತಿ, ವೆಂಕಟೇಶ್, ಶ್ರೀವತ್ಸ ನಾರಾಯಣ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!