Gauribidanur : ಗೌರಿಬಿದನೂರು ತಾಲ್ಲೂಕಿನ ಅಲಕಾಪುರ (Alakapura) ಗ್ರಾಮದಲ್ಲಿ ಸೋಮವಾರ ಚನ್ನಸೋಮೇಶ್ವರ (Sri Channasomeshwara Swami) ಗಿರಿಜಾ ಕಲ್ಯಾಣ ಮತ್ತು ರಥೋತ್ಸವ (Rathotsava) ವಿಜೃಂಭಣೆಯಿಂದ ನಡೆಯಿತು.
ರಥೋತ್ಸವಕ್ಕೆ ಶಿವಗಂಗಾ ಕ್ಷೇತ್ರದ ಮಲೆ ಮಹಾಂತ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಚಾಲನೆ ನೀಡಿದರು. ರಥೋತ್ಸವಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮಿಯವರ ದರ್ಶನ ಪಡೆದರು.
ತಾಲ್ಲೂಕು ಪಂಚಾಯಿತಿ ಇಒ ಜೆಕೆ ಹೊನ್ನಯ್ಯ ಮಾತನಾಡಿ, ‘ರಥೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಸಂಕ್ರಾಂತಿ ಸುಗ್ಗಿ ಅಡ್ಡಿ ಆತಂಕವಿಲ್ಲದೆ ನಡೆಯಲಿ. ರೈತರ ಬಾಳು ಹಸನಾಗಲಿ’ ಎಂದರು.