Gudibande : ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧುವಾರ ಅರೋಗ್ಯ ರಕ್ಷಾ ಸಮಿತಿಯ (Arogya Raksha Samiti) ವತಿಯಿಂದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ (Meeting) ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು “ಆಸ್ಪತ್ರೆಯಲ್ಲಿ ಸೇವಾ ಶುಲ್ಕ ದುರುಪಯೋಗ ಆಗುತ್ತಿದ್ದು ಕೂಡಲೇ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ಎಲ್ಲವನ್ನೂ ಅಡಿಟ್ ಮಾಡಿಸಬೇಕು. ಆಂಬುಲೆನ್ಸ್ ನೀಡಿ ಎರಡು ವರ್ಷಗಳಾಗಿದೆ. ಮೂರು ಸಲ ವಾಹನ ದುರಸ್ತಿಗೆ ಹೊಗಿದ್ದು ಇದಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣ. ಚಾಲಕರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ತಪ್ಪು ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕೃಷ್ಣೇಗೌಡ, ಜಿ.ಕೆ. ನಿರ್ಮಲಮ್ಮ, ಕೆ.ಟಿ.ನಂಜುಂಡಪ್ಪ, ಅಂಬರೀಶ್, ದಪ್ಪರ್ತಿ ನಂಜುಂಡ, ನಯಾಜ್, ಸಮಿಉಲ್ಲಾ, ತಾಲೂಕು ಅರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಆಡಳಿತಾಧಿಕಾರಿ ಡಾ.ಪ್ರದೀಪ್ ಉಪಸ್ಥಿತರಿದ್ದರು.