Bagepalli : ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಬುಧವಾರ ತಾಲ್ಲೂಕು ಆಡಳಿತ ವತಿಯಿಂದ ಜನಸ್ಪಂದನ ಕಾರ್ಯಕ್ರಮ (Jana Spandana Program) ನಡೆಸಲಾಯಿತು. ಕಂದಾಯ, ಪುರಸಭೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಅನುದಾನ, ಮನೆ, ನಿವೇಶನ, ಭಾಗ್ಯನಗರ ಎಂದು ಮರುನಾಮಕರಣ, ಅಕ್ರಮ ಗಣಿಗಾರಿಕೆ, ರಸ್ತೆ, ನೀರು ಸೇರಿದಂತೆ ವಿವಿಧ ಅಲವಾಲುಗಳನ್ನು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್ “ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಟ್ಟ ಕಡೆಯ ವ್ಯಕ್ತಿಯ ಸಂಕಷ್ಟವನ್ನು ಅಧಿಕಾರಿಗಳು ಕೇಳಿಸಿಕೊಂಡು ಬಗೆಹರಿಸಲಾಗುವುದು. ತಾಲ್ಲೂಕಿನ ಜ್ವಲಂತ ಸಮಸ್ಯೆಗಳು, ಗ್ರಾಮೀಣ ಜನರ ಅಹವಾಲುಗಳನ್ನು ನೇರವಾಗಿ ಅರ್ಜಿಯ ಮೂಲಕ ತಿಳಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ನಿಟ್ಟಾಲಿ, ತಿಪ್ಪೇಸ್ವಾಮಿ, ಅಶ್ವಿನ್, ಆರ್.ಐ.ಖಾಸಿಂ, ರಮೇಶ್, ಪ್ರಶಾಂತ್ ಕೆ.ಪಾಟೀಲ್, ಜಿ.ಎ.ರಮೇಶ್, ಪ್ರಶಾಂತ್ ವರ್ಣಿ, ವಿ.ಸುಬ್ರಮಣ್ಯಂ, ಜುಂಜಣ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.