Bagepalli : ಬಾಗೇಪಲ್ಲಿಯ ಮಲ್ಲಸಂದ್ರ (mallasandra) ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಆಚರಿಸುತ್ತಿದ್ದು ಈ ಹಬ್ಬವು ಗ್ರಾಮದಲ್ಲಿ ಸೌಹಾರ್ದದ ಸಂಕೇತವಾಗಿ ಪರಿಣಮಿಸಿದೆ (Muharram celebration).
ಒಂದೇ ಚಾವಡಿಯಲ್ಲಿ ಮುಸ್ಲಿಂ ಸಮುದಾಯದವರು ಬಾಬಯ್ಯ ಪೀರ್‌ಗಳಿಗೆ, ಹಿಂದೂ ಸಮುದಾಯದವರು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ.
ಭೈರವೇಶ್ವರ ಯುವಕರ ಸಂಘದ ನೇತೃತ್ವದಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೀರ್‌ಗಳಿಗೆ ವಿಶೇಷ ಪೂಜೆ, ಅಗ್ನಿಕುಂಡದ ಸುತ್ತಲೂ ಪ್ರದಕ್ಷಿಣೆ, ಎಲ್ಲರು ಒಂದೇ ರೀತಿಯ ಉಡುಪಿನಲ್ಲಿ ತಮಟೆಯ ಸದ್ದುಗಳಿಗೆ ಹೆಜ್ಜೆ ಹಾಕುವುದು ಹಬ್ಬದ ಆಕರ್ಷಣೆಯಾಗಿದೆ.
