ಕಾಂಗ್ರೆಸ್ ತೆಕ್ಕೆಗೆ ಬಾಗೇಪಲ್ಲಿ ಪುರಸಭೆ

- Advertisement -
- Advertisement -

Bagepalli : ಬಾಗೇಪಲ್ಲಿ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ (Municipal President Election) 23ನೇ ವಾರ್ಡ್‍ನ ಎ.ಶ್ರೀನಿವಾಸ್, 8ನೇ ವಾರ್ಡ್‍ನ ಸದಸ್ಯೆ ಸುಜಾತಾನಾಯ್ಡು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ “ಪುರಸಭೆಗೆ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಸುಜಾತಾನಾಯ್ಡು ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದರಿಂದ, ಸದಸ್ಯರ ಸರ್ವ ಅಭಿಪ್ರಾಯದಂತೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಜಾತಾನಾಯ್ಡು ಸೇರುತ್ತಾರೆ” ಎಂದು ತಿಳಿಸಿದರು.

ಫಲಿತಾಂಶ ಪ್ರಕಟವಾದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುರಸಭೆ ಮುಂದೆ ಜಮಾಯಿಸಿದರು. ಪಟಾಕಿ ಸಿಡಿಸಿ ಸಂಭ್ರಮಚಾರಣೆ ಮಾಡಿದರು.‌

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!