Bagepalli : ಬಾಗೇಪಲ್ಲಿ ತಾಲ್ಲೂಕಿನ ಉಗಲನಾಗೇಪಲ್ಲಿ ಗ್ರಾಮದ ಬಳಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಜಿಲ್ಲಾ ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಬಾಗೇಪಲ್ಲಿ ಹಾಗೂ ಚೇಳೂರು ತಾಲ್ಲೂಕುಗಳ ಮಹಾತ್ಮಗಾಂಧಿ ನರೇಗಾ ದಿನಾಚರಣೆ (Narega Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳಲ್ಲಿ ಮನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗದಿರುವುದು ನೋವು ತಂದಿದೆ. ಶಿಡ್ಲಘಟ್ಟದಲ್ಲಿ ನಡೆದ ನರೇಗಾ ಕಾಮಗಾರಿಯಿಂದ ಕೆರೆಗಳಲ್ಲಿ ನೀರು ತುಂಬಿದೆ. ಆದರೆ ತಾಲ್ಲೂಕಿನ ಕೆಲ ಕೆರೆಗಳಲ್ಲಿ ನರೇಗಾ ಕಾಮಗಾರಿ ಆಗಿಲ್ಲ. ಮುಂದಿನ ದಿನಗಳಲ್ಲಿ ಒಂದೊಂದು ಪಂಚಾಯಿತಿಯ ಅಧಿಕಾರಿ, ಆಡಳಿತ ಮಂಡಳಿ, ಮುಖಂಡರ ಸಭೆ ಹಮ್ಮಿಕೊಂಡು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು” ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತಿಕ್ ಭಾಷ, ಇಒ ಜಿ.ವಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲ್ಲೂಕು ಸಮನ್ವಯಾಧಿಕಾರಿ ವೆಂಕಟರಾಮಪ್ಪ, ನಾರಾಯಣ, ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಜಿ.ಲಕ್ಷ್ಮಿ, ಆರ್.ಹನುಮಂತರೆಡ್ಡಿ, ಸುಜಾತಮ್ಮ, ಎನ್.ಶಿವಪ್ಪ ಕಾಯಕ್ರಮದಲ್ಲಿ ಉಪಸ್ಥಿತರಿದ್ದರು.