Bagepalli : ವಿಜ್ಞಾನ ದಿನಾಚರಣೆ (National Science Day) ಅಂಗವಾಗಿ ಬಾಗೇಪಲ್ಲಿ ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಜ್ಞಾನ, ಗಣಿತ ವಿಷಯಗಳ ಬಗ್ಗೆ ವಸ್ತುಪ್ರದರ್ಶನ (science Maths exhibition) ಹಮ್ಮಿಕೊಳ್ಳಲಾಗಿತ್ತು.
ಶಾಲೆಯ 2ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳು ಹೃದಯ, ಅಂಗಾಂಗಳ ಚಲನಾವ್ಯೂಹ, ಜೀರ್ಣಾಂಗ, ವಿಸರ್ಜನಾಂಗ, ತಲೆ, ಮೆದುಳು, ಹಸಿರುಮನೆ, ವಿವಿಧ ಬಗೆಯ ಸಸ್ಯಗಳು, ಹಣ್ಣು, ತರಕಾರಿ, ಗಣಿತ ವಿಷಯದ ಅಂಕಿಗಳು, ಕಾಗುಣಿತ ಸೇರಿದಂತೆ ವಿವಿಧ ಬಗೆಯ ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುಗಳು ಹಾಗೂ ಚಿತ್ರಗಳ ಪ್ರದರ್ಶನ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾ ಎನ್.ವೆಂಕಟೇಶಪ್ಪ, ತಾಲ್ಲೂಕು ಸಮನ್ವಯ ಅಧಿಕಾರಿ ಆರ್.ವೆಂಕಟರಾಮಪ್ಪ, ಶಿಕ್ಷಣ ಅಧಿಕಾರಿ ಓಬೇದುಲ್ಲಾ, ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಲ್.ರವಿ, ಜಿ.ವಿ.ಚಂದ್ರಶೇಖರ್, ಶಾಲಾ ಮುಖ್ಯಶಿಕ್ಷಕಿ ಎಸ್.ವಿಜಯಲಕ್ಷ್ಮಿ, ಜಿ.ನಂದಿನಿ, ವಾಣಿ, ಚೇತನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.