Bagepalli : ಬಾಗೇಪಲ್ಲಿ ಪಟ್ಟಣದ ವಿ.ಆರ್.ಅಕಾಡೆಮಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ (National Youth Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ ಮಾತನಾಡಿ “ಜೀವನದಲ್ಲಿ ಒಳ್ಳೆಯ ಹಾಗೂ ಧನಾತ್ಮಕ ಚಿಂತನೆ, ಅಧ್ಯಯನ ಮಾಡುವ ವ್ಯಕ್ತಿಗಳಾಗಿ ಸಮಾಜದಲ್ಲಿ ಉತ್ತಮ ಸೇವೆ ಮಾಡುವಂತಾರಾಗಬೇಕು. ಹದಿಹರೆಯದ ಪ್ರೌಢ, ಪದವಿಪೂರ್ವ, ಪದವಿ ಶಿಕ್ಷಣ ಪಡೆಯುವ ಹಂತದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ಪಠ್ಯಪುಸ್ತಕಗಳ ಜೊತೆಗೆ ದಿನಪತ್ರಿಕೆಗಳು, ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ವಕೀಲ ವಿ.ವೆಂಕಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ಕೆ.ವಿ.ರಾಮಚಂದ್ರ, ಜಾವೇದ್ ಅಹಮದ್, ಸಿ.ಎಸ್.ರಾಮಾಂಜಿ, ಎನ್.ಪ್ರಸನ್ನಕುಮಾರ್, ಎ.ಮಂಜುನಾಥ, ಫಯಾಜ್ ಭಾಷ, ಚಂದ್ರಶೇಖರ್, ಸಿ.ಶ್ರೀನಿವಾಸರೆಡ್ಡಿ, ನಾರಾಯಣಶೆಟ್ಟು, ಎಂ.ಎನ್.ರಾವ್, ಸಿ.ಪಿ.ನರೇಶ್, ಎ.ಅಜಯ್, ಎ.ಸಿ.ವೆಂಕಟರಾಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.