Bagepalli : ಬಾಗೇಪಲ್ಲಿ ತಾಲೂಕಿನ ಘಂಟವಾರಿಪಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ವೈ.ಆರ್.ಸತೀಶ್ ಮಹತ್ವದ ಸಾಧನೆ ಮಾಡಿದ್ದಾನೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಪ್ರಾಯೋಜಿಸಿದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ (science model exhibition) ರಾಷ್ಟ್ರವನ್ನು ಪ್ರತಿನಿಧಿಸಲು (National Level) ಅವರನ್ನು ಆಯ್ಕೆ ಮಾಡಲಾಗಿದೆ.
ಸತೀಶ್ ಅವರು ತಮ್ಮ ವಿಜ್ಞಾನ ಶಿಕ್ಷಕರಾದ ಎಲ್.ರವಿ ಅವರ ಮಾರ್ಗದರ್ಶನದೊಂದಿಗೆ ತಮ್ಮ ಪ್ರಭಾವಶಾಲಿ ಬಹುಪಯೋಗಿ ಕುರ್ಚಿ ಮಾದರಿಯನ್ನು ಪ್ರದರ್ಶಿಸಿದರು. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಸತೀಶ್ ಈಗ ಜಪಾನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಹಂಬಲ ಹೊಂದಿದ್ದಾರೆ.
ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಭೂತಪೂರ್ವ ಕಲಾ ಪ್ರದರ್ಶನ, ಪ್ರತಿಭೆ ಹೊಂದಿದ್ದಾರೆ. ಇವರ ಪ್ರದರ್ಶನಕ್ಕೆ ಪೋಷಕರು, ಶಾಲಾ ಶಿಕ್ಷಕ, ಶಿಕ್ಷಕಿಯರ ಮಾರ್ಗದರ್ಶನವು ಮುಖ್ಯ ಆಗಿದೆ. ವಿಜ್ಞಾನ ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವುದು ತಾಲ್ಲೂಕಿಗೆ ಕೀರ್ತಿ ಬಂದಿದೆ ಎಂದರು.
ಶಿಕ್ಷಕ ನಾರಾಯಣಸ್ವಾಮಿ, ಎನ್.ಬಿರಾದಾರ ವಿಠಲ್, ಪಿ.ಎನ್.ನಾರಾಯಣಸ್ವಾಮಿ, ಜಂಗಮಶ್ರೀನಿವಾಸ್, ಶಿಕ್ಷಕಿ ಎನ್.ಸಂಧ್ಯಾ, ಎಸ್.ವರಲಕ್ಷ್ಮಿ, ಎಚ್.ಆರ್.ರಂಗನಾಥ್, ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
