19.3 C
Bengaluru
Friday, November 22, 2024

Bagepalli ರೈತರಿಗೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ

- Advertisement -
- Advertisement -

Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆದ್ದತುಂಕೇಪಲ್ಲಿ ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ (Agriculture Department) ಯಿಂದ ಬಿತ್ತನೆ ಬೀಜ (Sowing Seeds) ವಿತರಣೆ (Distribution) ಹಾಗೂ ಸಮಗ್ರ ಕೃಷಿ ಅಭಿಯಾನದ ರಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S.N. Subba Reddy) “ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಮುಂಗಾರು ಹಂಗಾಮಿನಲ್ಲಿ ರೈತರು (Farmer) ಕೃಷಿ ಬೆಳೆಗಳ ಜತೆಗೆ ತರಕಾರಿ (Vegitables) ಬೆಳೆಗಳನ್ನು ಬೆಳೆಯಬೇಕು. ರೈತರು ನೆಲಗಡಲೆ, ಮುಸುಕಿನ ಜೋಳದ ಬೆಳೆಗಳ ಮಧ್ಯದಲ್ಲಿ ದ್ವಿದಳ ಬೆಳೆಗಳ ಬಿತ್ತನೆ ಬೀಜಗಳನ್ನು ಸರತಿಸಾಲಿನಲ್ಲಿ ಹಾಕಿ ಬೆಳೆಗಳನ್ನು ಬೆಳೆಯಬಹುದು. ರೈತರಿಗೆ ಉಚಿತವಾಗಿ 4 ಕೆ.ಜಿ ತೊಗರಿ ಹಾಗೂ ಹೆಸರುಬೇಳೆ ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ವಿತರಿಸಲಾಗುತ್ತಿದ್ದು ಬೆಳೆಗಳು ಗುಣಮಟ್ಟದಿಂದ ಬಂದರೆ ಮುಂದಿನ ದಿನಗಳಲ್ಲಿ ಬಿತ್ತನೆ ಬೀಜಗಳನ್ನು ಎಲ್ಲ ರೈತರಿಗೆ ವಿತರಿಸಲಾಗುವುದು” ಎಂದು ತಿಳಿಸಿದರು.

ಈ ಕಾರ್ಯಕ್ರಮದ ನಂತರ ₹50 ಲಕ್ಷ ವೆಚ್ಚದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದ ಕ್ರಾಸ್‌ನಿಂದ ಊರಿನ ಕಡೆಗೆ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿಪೂಜೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥ ಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಕೃಷಿ ಅಧಿಕಾರಿ ಸುನೀಲ್, ಚಲಪತಿ, ಮಂಜುನಾಥ್, ದೇವರಗುಡಿಪಲ್ಲಿ ಪಿಡಿಒ ಶಂಕರಪ್ಪ, ಅಧ್ಯಕ್ಷ ಪವನ್ ಕಲ್ಯಾಣ್, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್, ಮುಖಂಡ ಅಮರನಾಥ ರೆಡ್ಡಿ, ಲಕ್ಷ್ಮಿನರಸಿಂಹಪ್ಪ, ಕೆ.ಆರ್.ನರೇಂದ್ರಬಾಬು, ಮಲ್ಲಿಕಾರ್ಜುನ ರೆಡ್ಡಿ, ಮುನಿಸ್ವಾಮಿ, ಗುಡಿಬಂಡೆ ಹರಿ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!