Bagepalli : ಬಾಗೇಪಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬಾಗೇಪಲ್ಲಿ ಪಟ್ಟಣದ 1ನೇ ವಾರ್ಡ್ ನಲ್ಲಿ ಮಂಗಳವಾರ ಸಿದ್ದರಾಮೇಶ್ವರ ಜಯಂತಿ (Sri Guru Siddarameshwara Jayanti) ಆಚರಿಸಿ ಗುರು ಸಿದ್ದರಾಮೇಶ್ವರ ಭವನವನ್ನು ಗಣ್ಯರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, “ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿ ಸಮುದಾಯಗಳನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿದ್ದು ಸರ್ಕಾರದಲ್ಲಿ ಸಮುದಾಯಗಳ ನಿಗಮ, ಮಂಡಳಿ, ಭವನಗಳನ್ನು ಮಾಡಿ ಆ ಸಮುದಾಯದ ಜನರ ಏಳಿಗೆಗೆ ಅನುಕೂಲ ಮಾಡಿದೆ. ಸಿದ್ದರಾಮೇಶ್ವರ ವಚನಗಳು, ಆಚಾರ ವಿಚಾರ, ನಡೆ–ನುಡಿ ಎಲ್ಲ ಕಾಲಕ್ಕೂ ಪ್ರಸ್ತುತ. ಭೋವಿ ಸಮುದಾಯದವರು ಕಲ್ಲುಬಂಡೆ ಒಡೆದು ಕುಲವೃತ್ತಿಯನ್ನೇ ನಂಬಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಸರ್ಕಾರದ ಅಧೀನದಲ್ಲಿ ಬೆಟ್ಟವನ್ನು ಗುರುತಿಸಿ, ಕಲ್ಲು, ಬಂಡೆ, ಸಪ್ಪಡಿ, ಜಲ್ಲಿ ಕಲ್ಲುಗಳನ್ನು ಒಡೆಯಲು ಅವಕಾಶ ಕಲ್ಪಿಸಲಾಗುವುದು. ಕೆಲ ಕ್ರಷರ್ ಮಾಲಿಕರು ಕಲ್ಲುಬಂಡೆ ಒಡೆಯುವವರಿಗೆ ತೊಂದರೆ ನೀಡಿದ್ದಾರೆ ಎಂಬ ದೂರು ಬಂದಿದ್ದು ಅಂಥವರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳಿಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಂಸದ ಮಲ್ಲೇಶಬಾಬು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಾಂದರೆಡ್ಡಿ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಪ್ರಶಾಂತ್ ವರ್ಣಿ, ಎನ್.ವೆಂಕಟೇಶಪ್ಪ, ಸಿ.ಎನ್.ಶೇಷಾದ್ರಿ, ಎಂ.ಶ್ರೀನಿವಾಸ್, ಪ್ರೊ.ಕೆ.ಟಿ.ವೀರಾಂಜನೇಯ, ಆದಿನಾರಾಯಣಪ್ಪ, ಆರ್.ಹನುಮಂತರೆಡ್ಡಿ, ವಿನಯಕುಮಾರ್, ಎಂ.ವಿ.ಕೃಷ್ಣಪ್ಪ, ಮಲ್ಲಸಂದ್ರ ಶ್ರೀನಿವಾಸ್, ಪಿ.ಡಿ.ವೆಂಕಟರಾಂ, ಕೆ.ನಾಗರಾಜು, ಎ.ವಿ.ಪೂಜಪ್ಪ, ಪಿ.ಮಂಜುನಾಥರೆಡ್ಡಿ, ಲಕ್ಷ್ಮಿನರಸಿಂಹಪ್ಪ ಉಪಸ್ಥಿತರಿದ್ದರು.