Bagepalli : ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಪದವಿ ಕಾಲೇಜಿನ (National College) ಆಟದ ಮೈದಾನದಲ್ಲಿ ಬುಧವಾರ ತಾಲ್ಲೂಕು ಮಟ್ಟದ ಕ್ರೀಡಾಕೂಟ (Taluk Level Sports Meet) ಆಯೋಜನೆಗೆ ವೇದಿಕೆ ಸಿದ್ಧಪಡಿಸಿ, ಆಡಳಿತ ಮಂಡಳಿ ಮುಖ್ಯಸ್ಥರು ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಮಂಗಳವಾರ ರಾತ್ರಿ ಆಹಾರ ಮತ್ತು ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ನಿಧನರಾಗಿದ್ದರಿಂದ ಶೋಕಾಚರಣೆ ಆಚರಿಸಲು ನಿರ್ಧರಿಸಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.
ನ್ಯಾಷನಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜ ರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S.N. Subbareddy) ಹಾಗೂ ಗಣ್ಯರು ಸಚಿವ ಕತ್ತಿಯವರ ನಿಧನಕ್ಕೆ ಮೌನಾಚರಣೆ ಮಾಡಿ (Condolence), ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಬಾಗೇಪಲ್ಲಿ ತಾಲ್ಲೂಕಿನ 11 ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ನ್ಯಾಷನಲ್ ಆಡಳಿತ ಮಂಡಳಿಯ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿ.ವಿ.ರಾಜಾರೆಡ್ಡಿ, ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ಉಪ ಪ್ರಾಂಶುಪಾಲ ಆರ್.ಎನ್.ವೆಂಕಟೇಶ ಬಾಬು, ದೈಹಿಕ ಶಿಕ್ಷಣದ ವಿಭಾಗದ ನಿರ್ದೇಶಕ ಸಿ.ವಿಜಯಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎನ್.ನಾಗರಾಜ್, ಜಿಲ್ಲಾ ಖಜಾಂಚಿ ನಂಜಿರೆಡ್ಡಿ, ನಿರ್ದೇಶಕ ಎನ್.ನಾಗರಾಜ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್ವರಪ್ಪ, ಸಿ.ವಿ.ನರಸಿಂಹಪ್ಪ, ಡಿ.ಎನ್.ರಘುನಾಥ್, ಅಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.