19.5 C
Bengaluru
Wednesday, February 25, 2026

ಕೋಲಾರ ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ

- Advertisement -
- Advertisement -

Kolar : ತ್ಯಾಗ, ಬಲಿದಾನದ ಸಂಕೇತವಾದ ಈದ್‌–ಉಲ್‌–ಅದಾ (Bakrid) ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಸೋಮವಾರ ಶ್ರದ್ಧಾಭಕ್ತಿಯಿಂದ ತಾಲ್ಲೂಕು ಕೇಂದ್ರಗಳಲ್ಲಿ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಮೌಲಾ ಖಾಜ ಈದ್ಗಾ ಮೈದಾನದಲ್ಲಿ ಹಜರತ್ ಮೌಲಾನ ಮೌಲ್ವಿ ಮೊಹಮ್ಮದ್ ಶಫಿ ಉರ್ ರೆಹಮಾನ್ ನಿಜಾಮಿ ರಿಜ್ವಿ ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆ ನೆರವೇರಿಸಿದರು.

ಮುಳಬಾಗಿಲು :

Bakrid Celebration 2024 Mulbagal

ಮುಳಬಾಗಿಲು ನಗರದ ಜಹಾಂಗೀರ್ ಮೊಹಲ್ಲಾದ ಈದ್ಗಾ ಮತ್ತು ಮೆಕ್ಕಾ ಮೈದಾನ, ನಂಗಲಿ ಹೈದರ್ ವಲ್ಲಿ ದರ್ಗಾ, ತಾಯಲೂರು, ಹೆಬ್ಬಣಿ, ಕಪ್ಪಲಮಡಗು, ಪದ್ಮಘಟ್ಟ, ಆವಣಿ ಮತ್ತಿತರ ಕಡೆಗಳಲ್ಲಿ ಬೆಳಿಗ್ಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಬಂಗಾರಪೇಟೆ :

Bakrid Celebration 2024 Bangarapete

ಬಂಗಾರಪೇಟೆಯ ಕೋಲಾರ ಮುಖ್ಯ ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದ ಮುಸ್ಲಿಂರು ದರ್ಗಾ ಮೈದಾನ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಾಲೂರು :

Bakrid Celebration 2024 Malur

ಬಕ್ರೀದ್‌ ಅಂಗವಾಗಿ ಬೆಳಿಗ್ಗೆ ಮಾಲೂರಿನ ಈದ್ಗಾ ಮೈದಾನಕ್ಕೆ ಸಾವಿರಾರು ಮಂದಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!