Bangarapete : ಆಹ್ವಾನ್ ಫೌಂಡೇಷನ್ ಹಾಗೂ ಓಲಿ ವೈಬ್ರೇಟರ್ಸ್ ಇಂಡಿಯಾ ಪ್ರೈ. ಲಿ.ನ ಸಿಎಸ್‌ಆರ್ ನಿಧಿ ಅಡಿ ನಿರ್ಮಿಸಲಾದ ಬಂಗಾರಪೇಟೆ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು (Government School New Building) ಭಾನುವಾರ ಉದ್ಘಾಟಿಸಲಾಯಿತು. ನಿಧಿಯಿಂದ ಸರ್ಕಾರಿ ಶಾಲೆಗೆ ನೂತನ ಕಟ್ಟಡ
ಈ ಸಂಧರ್ಭದಲ್ಲಿ ಮಾತನಾಡಿದ ಆಹ್ವಾನ್ ಫೌಂಡೇಷನ್‌ನ ಸಿಇಒ ಬ್ರಜ್ ಕಿಶೋರ್ ಪ್ರಧಾನ್ “ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೇವಲ 120 ದಿನಗಳಲ್ಲಿ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದ್ದು ಶಾಲೆಯನ್ನು ಕಾಪಾಡುವುದು ಗ್ರಾಮಸ್ಥರ ಹಾಗೂ ಶಾಲಾ ಶಿಕ್ಷಕರ ಜವಾಬ್ದಾರಿ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡಲು ಇಲಾಖೆಯಿಂದ ಸಾಧ್ಯವಾಗದ ಪಕ್ಷದಲ್ಲಿ ನಮ್ಮ ಸಂಸ್ಥೆಯಿಂದ ನುರಿತ ಶಿಕ್ಷಕರನ್ನು ನಿಯೋಜನೆ ಮಾಡುತ್ತೇವೆ. ಕೋಲಾರ ಜಿಲ್ಲೆಯಲ್ಲಿ 27 ಶಾಲೆಗಳನ್ನು ಅಭಿವೃದ್ದಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಓಲಿ ವೈಬ್ರೇಟರ್ಸ ಇಂಡಿಯಾ ಪ್ರೈ. ಲಿ. ವ್ಯವಸ್ಥಾಪಕ ನಿರ್ದೇಶಕ ಸುಂದರಂ ಅಯ್ಯರ್, ಗ್ರಾ.ಪಂ ಅಧ್ಯಕ್ಷೆ ಸುಗುಣ ಮಂಜುನಾಥ, ಪಿಡಿಒ ಶಂಕರ್, ರ್ಕಾರ್ಯದರ್ಶಿ ಸುಕನ್ಯಾ, ಇಸಿಒ ಅಬ್ದುಲ್ ವಾಜೀದ್, ಅಬ್ದುಲ್ ಗಣಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಕಿಶೋರ್, ಹರೀಶ್ ನಾರಾಯಣಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಗೋಪಾಲ್, ಮಂಜುನಾಥ ಉಪಸ್ಥಿತರಿದ್ದರು.