Bangarapete : ಬಂಗಾರಪೇಟೆ ತಾಲೂಕು ಹುಣಸನಹಳ್ಳಿ (Hunasanahalli) ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ (PACS Election) ಆಡಳಿತ ಮಂಡಳಿಗೆ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಹುಣಸನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ– ವಿ.ಮುನಿಸ್ವಾಮಿ, ಸಂಪಂಗರೆಡ್ಡಿ, ಎಂ.ಗೋವಿಂದಪ್ಪ, ನಾರಾಯಣಪ್ಪ, ಶಂಕರಪ್ಪ, ಸಿ.ಮಾದೇಶ್ ಗೌಡ, ಮುನಿಯಮ್ಮ ಮತ್ತು ವಿ.ಎಸ್ ವೀಣಾ, ಎಚ್.ಆರ್. ಶ್ರೀನಿವಾಸ್, ನಾರಾಯಣಸ್ವಾಮಿ, ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಬಾಲಕೃಷ್ಣಪ್ಪ ಘೋಷಿಸಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ, ಮಾಜಿ ಅಧ್ಯಕ್ಷ ಎಚ್.ವಿ. ಶ್ರೀನಿವಾಸ್, ಗೋಪಾಲಪ್ಪ, ಡೈರಿ ಅಧ್ಯಕ್ಷ ಎಸ್. ರಮೇಶ, ಜಯರಾಮ, ಗೋವಿಂದಪ್ಪ, ಸುರೇಶ, ಅಮರೇಶ, ರಾಜು, ಅತ್ತಿಗಿರಿಕೊಪ್ಪ ಜಯರಾಮ ಉಪಸ್ಥಿತರಿದ್ದರು.