Chintamani : ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಜಯ ಸಂಕಲ್ಪ ಯಾತ್ರೆ ಮಂಗಳವಾರ ಚಿಂತಾಮಣಿ ನಗರಕ್ಕೆ ಆಗಮಿಸಿತು.
ಈ ಸಂಧರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ “ನಾವು ದಿವಂಗತ ಕೆ.ಎಂ ಕೃಷ್ಣಾರೆಡ್ಡಿ ಅವರ ರಾಮರಾಜ್ಯವನ್ನು ಮರುಸ್ಥಾಪಿಸಾಲು ಬಿಜೆಪಿ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು. ಕೆ.ಎಂ.ಕೃಷ್ಣಾರೆಡ್ಡಿ ರವರು ಗೃಹ, ಸಮಾಜ ಕಲ್ಯಾಣ, ಲೋಕೋಪಯೋಗಿ ಸಚಿವರಾಗಿದ್ದರೂ, ಸಾಮಾನ್ಯ ವ್ಯಕ್ತಿಯಂತೆ ಜೀವನ ಸವೆಸಿದ್ದರು. ಅಂತಹ ವ್ಯಕ್ತಿಯ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೋವಿಡ್ ವೇಳೆ ಮೂರು ಡೋಸ್ ಲಸಿಕೆ ನೀಡಿದ್ದು ಪ್ರತಿ ರೈತನಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ₹6,000, ರಾಜ್ಯ ಸರ್ಕಾರದಿಂದ ₹4,000 ಸೇರಿ ಒಟ್ಟು ₹10 ಸಾವಿರ ನೀಡಲಾಗುತ್ತಿರುವುದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ನಮ್ಮ ಅಭ್ಯರ್ಥಿ ಗೆಲ್ಲುವವರೆಗೂ ಚಿಂತಾಮಣಿಯಲ್ಲಿರುತ್ತೇನೆ. ಚಿಂತಾಮಣಿಯಲ್ಲಿ ಬಿಜೆಪಿಯೇ ಇಲ್ಲ ಎನ್ನುವವರಿಗೆ ತಕ್ಕ ಉತ್ತರ ನೀಡಲಾಗಿದೆ’ ಎಂದರು.
ಕಂದಾಯ ಸಚಿವ ಆರ್. ಅಶೋಕ್, ಸಂಸದ ಎಸ್.ಮುನಿಸ್ವಾಮಿ, ಸ್ಥಳೀಯ ಮುಖಂಡ ಜಿ.ಎನ್.ವೇಣುಗೋಪಾಲ್ ಸೇರಿದಂತೆ ಕ್ಷೇತ್ರದ ಮುಖಂಡರು ಭಾಗವಹಿಸಿದ್ದರು.
BJP Vijay Sankalpa Yatra made its way to Chintamani
The Bharatiya Janata Party’s (BJP) Vijay Sankalpa Yatra made its way to Chintamani on Tuesday, where Health Minister Dr. K. Sudhakar addressed the gathering. In his speech, he urged the party to choose a candidate who could restore the utopia of late K.M. Krishnareddy’s time in the Chintamani assembly constituency.
Krishnareddy, a former minister who held the portfolios of Home, Social Welfare and Public Works, lived the life of a common man, and Dr. Sudhakar emphasized that it was the party’s duty to fulfill the wishes of such a person. He also called for hard work from everyone to ensure that the BJP’s lotus blooms in Chintamani and that the party’s candidate emerges victorious in the upcoming elections.
Dr. Sudhakar further highlighted the achievements of the Prime Minister Narendra Modi government during the COVID-19 pandemic, stating that the government had administered three doses of the vaccine to the people. He also mentioned the Kisan Samman scheme, under which each farmer is being given ₹6,000, along with an additional ₹4,000 from the state government, making a total of ₹10,000.
He further jibed at the Congress party, stating that it had a “double engine bus,” but with two steering wheels. He joked that if Siddaramaiah pulled on one side, DK Shivakumar pulled on the other, causing chaos in the party.
The event was attended by Revenue Minister R. Ashok, MP S. Muniswamy, local leader G. N. Venugopal, and other party leaders from the constituency. Dr. Sudhakar concluded his speech by affirming that he would continue to stay in Chintamani until the BJP’s candidate emerged victorious.