Chintamani : ಚಿಂತಾಮಣಿ ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ಜನಸೇನಾ ಆರ್ಮಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಹಾಗೂ ನೇತ್ರದಾನ ಶಿಬಿರಕ್ಕೆ ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕದ ಕಾರ್ಯದರ್ಶಿ ನಾರಾಯಣರೆಡ್ಡಿ ಚಾಲನೆ ನೀಡಿದರು. ಶಿಬಿರದಲ್ಲಿ 81 ಯೂನಿಟ್ ರಕ್ತ ಸಂಗ್ರಹಣೆ ಮತ್ತು 79 ಮಂದಿ ನೇತ್ರದಾನ ಮಾಡಲು ನೋಂದಾಯಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣರೆಡ್ಡಿ “ರಕ್ತದಾನದಿಂದ ಬಲಹೀನರಾಗುತ್ತಾರೆ ಎನ್ನು ವುದು ತಪ್ಪು ಕಲ್ಪನೆ, ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು, ಕೋವಿಡ್-19 ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳ ಆಯೋಜನೆ ಕಡಿಮೆಯಾಗಿದ್ದು ರಕ್ತದ ಕೊರತೆಯುಂಟಾಗಿದೆ” ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಕಾಗತಿ ವೆಂಕಟರತ್ನಂ, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಜನಸೇವಾ ಆರ್ಮಿಯ ಆರ್.ಆರ್. ರೆಡ್ಡಿ, ಶಾಬುದ್ದೀನ್, ಗಿಡ್ಡು, ನರಸಿಂಹಗೌಡ, ಮುರಳಿ, ಸುನಿಲ್ ಕುಮಾರ್, ಗನಿ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಆರ್.ಶರತ್, ಉಪಾಧ್ಯಕ್ಷ ಬೂಸಾ ರಾಜೇಶ್, ಸದಸ್ಯ ದರ್ಶನ್, ಬದರಿ, ಖಜಾಂಚಿ ನಾಗವಿಕಾಸ್, ದಶರಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.