Chintamani : ಚಿಂತಾಮಣಿ ನಗರದ ನೆಕ್ಕುಂದಿ ಕೆರೆಯಲ್ಲಿ ಭಾನುವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ (Boy Death by Drowning).
ಚಿಂತಾಮಣಿ ನಗರದ 27ನೇ ವಾರ್ಡ್‌ನ ಶಾಂತಿನಗರದ ನಿವಾಸಿ ಚರಣ್ (14) ಮೃತಪಟ್ಟ ಬಾಲಕನೆಂದು ಗುರುತಿಸಲಾಗಿದ್ದು ಶಾಲೆಗೆ ರಜೆ ಇದ್ದುದರಿಂದ ನೆಕ್ಕುಂದಿ ಕೆರೆ ಸಮೀಪ ಆಟವಾಡುತ್ತಿದ್ದ. ಕಾಲು ತೊಳೆಯಲು ಹೋಗಿ ಅಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.