24.6 C
Bengaluru
Wednesday, February 25, 2026

ಕೆನರಾ ಬ್ಯಾಂಕ್‌ನಿಂದ ಉಚಿತ ತರಬೇತಿ: ಫಾಸ್ಟ್‌ಫುಡ್, ಆಭರಣ, ಕುರಿ ಸಾಕಾಣಿಕೆ ಕಲಿಕೆ

- Advertisement -
- Advertisement -

Chikkaballapur : ಯಂ ಉದ್ಯೋಗ ಆರಂಭಿಸಲು ಬಯಸುವ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಕೆನರಾ ಬ್ಯಾಂಕ್‌ನ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (RUDSETI) ವತಿಯಿಂದ ಡಿಸೆಂಬರ್ 10 ರಿಂದ ಉಚಿತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಫಾಸ್ಟ್‌ಫುಡ್‌ ಸ್ಟಾಲ್‌ ಉದ್ಯಮ (12 ದಿನ), ಕೃತಕ ಆಭರಣ ತಯಾರಿಕೆ, ಜೂಟ್ ಬ್ಯಾಗ್ ತಯಾರಿಕೆ ಮತ್ತು ಕುರಿ ಸಾಕಾಣಿಕೆ ಕುರಿತು ತರಬೇತಿ ನೀಡಲಾಗುವುದು.

ತರಬೇತಿಯ ಮುಖ್ಯಾಂಶಗಳು:

ಯಾರು ಭಾಗವಹಿಸಬಹುದು?: 18 ರಿಂದ 50 ವರ್ಷ ವಯೋಮಾನದ ನಿರುದ್ಯೋಗಿ ಮಹಿಳೆಯರು ಮತ್ತು ಪುರುಷರು.

ಆದ್ಯತೆ: ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅವಶ್ಯಕತೆ: ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಸೌಲಭ್ಯ: ತರಬೇತಿ ಸಮಯದಲ್ಲಿ ಊಟ, ವಸತಿ ಮತ್ತು ತರಬೇತಿ ಸಂಪೂರ್ಣ ಉಚಿತ.

ಪ್ರಮಾಣ ಪತ್ರ: ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ ನೀಡಲಾಗುವುದು.

ನೋಂದಣಿ ಮತ್ತು ಸ್ಥಳ: ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (RUDSETI), ಚದಲಾಪುರ ಇಲ್ಲಿಗೆ ತಮ್ಮ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ನೇರವಾಗಿ ಹಾಜರಾಗಬಹುದು.

ಸಂದರ್ಶನಕ್ಕೆ ಹಾಜರಾಗುವ ಮೊದಲು ಅಭ್ಯರ್ಥಿಗಳು ಡಿಸೆಂಬರ್ 10 ರೊಳಗೆ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಮೊಬೈಲ್ ಸಂಖ್ಯೆಗಳಾದ 9482968638, 9901069664, 9620601808 ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!