Home News Chintamani ಕಾರು ಬೈಕ್ ಡಿಕ್ಕಿ : ಸವಾರರಿಗೆ ಗಾಯ

ಕಾರು ಬೈಕ್ ಡಿಕ್ಕಿ : ಸವಾರರಿಗೆ ಗಾಯ

0
735
Car Bike Accident Bengaluru-Kadapa road Chintamani

Chintamani : ಬೆಂಗಳೂರು-ಕಡಪಾ ರಸ್ತೆಯಲ್ಲಿರುವ (Bengaluru-Kadapa road) ಕೆಂಚಾರ್ಲಹಳ್ಳಿ (Kencharlahalli) ಪೊಲೀಸ್ ಠಾಣಾ ವ್ಯಾಪ್ತಿಯ ಮರಿನಾಯಕನಹಳ್ಳಿ ಗೇಟ್ (Marinayakanahalli gate) ಬಳಿ ಶನಿವಾರ ಸಂಜೆ ಎರಡು ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದ್ದು (Accident), ವಾಹನ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕ ಹೋಬಳಿಯ ಬುರುಕಾಯಲಕೋಟೆ ಗ್ರಾಮದ ಮುನಿಶಾಮಿ ಹಾಗೂ ಚಿಂತಾಮಣಿ ತಾಲ್ಲೂಕಿನ ಕೊರಕೋನಹಳ್ಳಿಯ ಆರ್.ವಿಶ್ವನಾಥ್ ಗಾಯಗೊಂಡ ಸವಾರರು.

ಮುನಿಶಾಮಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ಚಿಂತಾಮಣಿ ತಾಲ್ಲೂಕಿನ ಹಿರಣ್ಯಹಳ್ಳಿ ಗ್ರಾಮಕ್ಕೆ ಬರುತ್ತಿದ್ದರು. ತಾಡಿಕೋಳ್ ಕ್ರಾಸ್‌ನಿಂದ ಬರುತ್ತಿದ್ದಾಗ ಮರಿನಾಯಕನಹಳ್ಳಿ ಗೇಟ್ ಬಳಿ ಚಿಂತಾಮಣಿ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಜತೆಗೆ ಮತ್ತೊಂದು ವಾಹನಕ್ಕೂ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಕೆಳಕ್ಕೆ ಉರುಳಿಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ಮೊದಲಿಗೆ ಮೊದಲಿಗೆ ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.

ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!