ಕೈವಾರದಲ್ಲಿ ಬೋನಿಗೆ ಬಿದ್ದ ಚಿರತೆ

- Advertisement -
- Advertisement -

Chintamani : ಚಿಂತಾಮಣಿ ತಾಲೂಕಿನ ಶಾಮರಾವ್ ಹೊಸಪೇಟೆ ಗ್ರಾಮದ ಬಳಿ ಕೈವಾರದ (Kaiwara) ಬೆಟ್ಟ ಹಾಗೂ ಕೊಂಗನಹಳ್ಳಿ, ಗುನ್ನಹಳ್ಳಿ ಮತ್ತು ಕೈವಾರ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸುಮಾರು ಎರಡು ಮೂರು ತಿಂಗಳಿಂದ ಓಡಾಡಿಕೊಂಡು ಜನರಲ್ಲಿ ಭಯದ ವಾತಾವರಣ ಹುಟ್ಟಿಸಿದ್ದ ಚಿರತೆಯನ್ನು (Cheetah) ಶನಿವಾರ ಸೆರೆಹಿಡಿಯಲಾಗಿದೆ (Captured).

ಎರಡು ತಿಂಗಳ ಹಿಂದೆ ಕೊಂಗನಹಳ್ಳಿಯ ಹೊರವಲಯದಲ್ಲಿ ಯುವಕರು ಆಟ ಆಡುತ್ತಿದ್ದ ಸಮಯದಲ್ಲಿ ಬೆಟ್ಟದ ಮೇಲೆ ಚಿರತೆ ಕಾಣಿಸಿದ್ದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಗ್ರಾಮ ಪಂಚಾಯಿತಿ ಸದಸ್ಯ ಮುನಿಶಾಮಿರೆಡ್ಡಿ ಛಾಯಾಗ್ರಾಹಕರನ್ನು ಕರೆಸಿ ಡ್ರೋಣ್‌ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿದಾಗ ಚಿರತೆ ಇರುವುದು ಖಚಿತವಾಗಿತ್ತು.

ಅರಣ್ಯಾಧಿಕಾರಿಗಳು ಕೈವಾರದ ತಪೋವನದ ಬಳಿ ಇಟ್ಟಿದ್ದ ಬೋನಲ್ಲಿ ಸೆರೆ ಹಿಡಿದ ಚಿರತೆಯನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!