Chelur : ಚೇಳೂರು ತಾಲ್ಲೂಕಿನ ನಲ್ಲಗುಟ್ಲಪಲ್ಲಿ ಕ್ಲಸ್ಟರ್‌ನ ಪಸುಪುಲವಾರಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ (Poshan Abhiyan) ಕಾರ್ಯಕ್ರಮವನ್ನು ಆಚರಿಸಲಾಯಿತು. ಅಭಿಯಾನದಲ್ಲಿ ವಿವಿಧ ಧಾನ್ಯಗಳ, ಹಣ್ಣು, ಹೂವು ಇಟ್ಟು ರಂಗೋಲಿಯ ಆಕಾರದಲ್ಲಿ ಸೀರೆಗಳಿಂದ ಮಾಡಿದ್ದ ವಿಭಿನ್ನ ಅಲಂಕಾರ ಜನಮನ ಸೆಳೆಯಿತು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ವಿ.ಸತ್ಯನಾರಾಯಣ ಮಾತನಾಡಿ “ವಿದ್ಯಾರ್ಥಿಗಳು ಪ್ರತಿನಿತ್ಯವೂ ವ್ಯಾಯಾಮ ಯೋಗ ಮಾಡುವುದರ ಮೂಲಕ ಪೌಷ್ಠಿಕ ಆಹಾರಗಳ ಸೇವನೆಯೊಂದಿಗೆ ತಿಂಗಳ ತಪಾಸಣೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತೆ ಕೆ.ಎನ್.ವಿಜಯಲಕ್ಷ್ಮಿ ಮಾತನಾಡಿದರು. ಸಹಶಿಕ್ಷಕ ವಿ.ಲಕ್ಷ್ಮಿನಾರಾಯಣ, ನರಸಿಂಹಪ್ಪ, ಸುನೀತ, ರವಣಮ್ಮ ಭಾಗಿಯಾಗಿದ್ದರು.