Chikkaballapur : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (All India Veerashaiva Mahasabha) ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ಚಿಕ್ಕಬಳ್ಳಾಪುರ ನಗರದ ವಿದ್ಯಾಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಎಂ.ಎನ್.ಶಶಿಧರ್ “ವೀರಶೈವ ಲಿಂಗಾಯತ ಸಮುದಾಯ (Veerashaiva Lingayat community) ದ ಜನಗಣತಿ (Census) ಕಾರ್ಯ ನಡೆಯಬೇಕಾಗಿದ್ದು ಎಲ್ಲ ಹಳ್ಳಿಗಳಲ್ಲಿನ ಲಿಂಗಾಯತ ಸಮುದಾಯದ (Lingayat community) ಮಾಹಿತಿಯನ್ನು ಕಲೆಹಾಕಿ ಜಿಲ್ಲೆಯಲ್ಲಿ ಬಸವ ಭವನ (Basava Bhavana) ನಿರ್ಮಾಣ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ. ಅಲ್ಪಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಸಮುದಾಯದ ಒಳಪಂಗಡಗಳ ನಡುವಿನ ಅಂತರಗಳನ್ನು ಮರೆತು ಒಗ್ಗಟ್ಟಿನಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ಹಲವು ವರ್ಷಗಳ ಶ್ರಮದ ಫಲವಾಗಿ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಘಟಕವು ಕಾರ್ಯಾರಂಭವಾಗಿದೆ” ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಸ್.ಭಾಸ್ಕರ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜೇಂದ್ರ ಬಾಬು, ಶಿಡ್ಲಘಟ್ಟದ ನಂದೀಶ್, ಹಳೆಹಳ್ಳಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.