Chikkaballapur – ಅಂಬೇಡ್ಕರ್ ಗೆ ಅವಮಾನ ಖಂಡಿಸಿ ಪ್ರತಿಭಟನೆ
Chikkaballapur : ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರ ಮೂಲಕ ಈ ಸಂಬಂಧ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ (Dr. B.R. Ambedkar) ಸೇನೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ಗುರುವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸರ್ಕಾರದ ಆದೇಶವಿದ್ದರೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿದ್ದು ಖಂಡನೀಯ. ನ್ಯಾಯಾಧೀಶರನ್ನು ಹುದ್ದೆಯಿಂದ ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಮನವಿ ಸಲ್ಲಿಸಿದರು. ನಾರಾಯಣಸ್ವಾಮಿ, ವೈ. ಶಂಕರ್, ಗಿರೀಶ್, ಮುನಿರಾಜು, ಮುನೀಂದ್ರ, ದೇವದಾಸ್, ಮಂಜು, ನಂದ, ಪುರುಷೋತ್ತಮ, ಪವನ್ ಉಪಸ್ಥಿತರಿದ್ದರು.
Copy and paste this URL into your WordPress site to embed
Copy and paste this code into your site to embed