Home News Chikkaballapur ಜಿಲ್ಲೆಯಾದ್ಯಂತ ದಲಿತ ಸಂಘರ್ಷ ಸಮಿತಿ ಧರಣಿ ಅಂತ್ಯ

ಜಿಲ್ಲೆಯಾದ್ಯಂತ ದಲಿತ ಸಂಘರ್ಷ ಸಮಿತಿ ಧರಣಿ ಅಂತ್ಯ

0
194
Chikkaballapur DSS Protest Ended

Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಭೂಮಿ, ವಸತಿ ಸಮಸ್ಯೆಗಳ ಪರಿಹಾರ, ಬಗರ್‌ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ನೀಡುವುದು ಸೇರಿದಂತೆ ಜಿಲ್ಲೆಯಲ್ಲಿನ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಜನವರಿ 20 ರಿಂದ ದಲಿತ ಸಂಘರ್ಷ ಸಮಿತಿಯು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಗುರುವಾರ ವಾಪಸ್ ಪಡೆದಿದೆ (DSS Protest Ended).

ಚಿಕ್ಕಬಳ್ಳಾಪುರ ನಗರದ ಉಪವಿಭಾಗಾಧಿ ಕಾರಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರ ಅಶ್ವಿನ್ ಕುಮಾರ್ ಮತ್ತು ತಹಶೀಲ್ದಾರ್ ಅನಿಲ್ ಅವರು ಭೇಟಿ ನೀಡಿ ಯಾವ ಸಮಸ್ಯೆಗಳನ್ನು ‍ಪರಿಹರಿಸಲಾಗಿದೆ ಎನ್ನುವುದನ್ನು ಪ್ರತಿಭಟನಕಾರರ ಗಮನಕ್ಕೆ ತಂದರು. ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.

ಬಾಗೇಪಲ್ಲಿ :

Bagepalli DSS Protest Ended

ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ದಸಂಸ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಹಶೀಲ್ದಾರ್ ಮನೀಷಾ ಎನ್. ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಕೈಬಿಡಲಾಯಿತು.

ಶಿಡ್ಲಘಟ್ಟ :

Sidlaghatta DSS Protest Ended

ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮುಂಭಾಗ ಕಳೆದ ಹನ್ನೊಂದು ದಿನಗಳಿಂದ ದಸಮಸ ವತಿಯಿಂದ ನಡೆಸಿದ ಅನಿರ್ಧಿಷ್ಟ ಧರಣಿ ಕೈ ಬಿಟ್ಟ ಮುಖಂಡರು ಗುರುವಾರ ತಹಸೀಲ್ದಾರ್ ಬಿ.ಎನ್.ಸ್ವಾಮಿ ರಿಗೆ ಮನವಿ ಪತ್ರ ಸಲ್ಲಿಸಿದರು.

ಗೌರಿಬಿದನೂರು:

Gauribidanur DSS Protest Ended

ಗೌರಿಬಿದನೂರು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಗುರುವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಯಿತು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!