ಜಿಲ್ಲೆಯಾದ್ಯಂತ ಕ್ರಾಂತಿಕಾರಿ ಗಾಯಕ ಗದ್ದರ್ ರವರಿಗೆ ಶ್ರದ್ಧಾಂಜಲಿ

- Advertisement -
- Advertisement -

Chikkaballapur : ಕ್ರಾಂತಿಕಾರಿ ಗೀತೆಗಳ ಮೂಲಕ ಹೋರಾಟಗಳಿಗೆ ಜೀವ ತುಂಬಿದ್ದ ಹಾಗೂ ಜನ ಸಂಘಟನೆಗೆ ಕಾರಣರಾಗಿದ್ದ ಗಾಯಕ ಗದ್ದರ್ (Gaddar) ರವರು ಭಾನುವಾರ ಅನಾರೋಗ್ಯದಿಂದ ಹೈದರಾಬಾದಿನಲ್ಲಿ ಮೃತಪಟ್ಟರು. ಅಗಲಿದ ಕ್ರಾಂತಿಕಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ (Tribute) ಸಲ್ಲಿಸಲಾಯಿತು.

ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಗದ್ದರ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಹೋರಾಟವನ್ನು ಸ್ಮರಿಸಿದರು.

ಬಾಗೇಪಲ್ಲಿ

Bagepalli Gaddar tribute

ಬಾಗೇಪಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಎದುರು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕ್ರಾಂತಿಕಾರಿ ಗಾಯಕ ಹಾಗೂ ಕವಿ ಗದ್ದರ್ ಅವರಿಗೆ ನೀಲಿ ವಂದನೆಗಳ ಘೋಷಣೆ ಕೂಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!