Chikkaballapur : ಚಿಕ್ಕಬಳ್ಳಾಪುರ ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರ ತಾಲ್ಲೂಕಿನ ಮಂಡಿಕಲ್ಲು (Mandikal) ಮತ್ತು ಪೆರೇಸಂದ್ರದ (Peresandra) ಸುತ್ತಮತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್‌ಗಳನ್ನು (Illegal Crusher) ನಿಲ್ಲಿಸುವಂತೆ (Stop) ಮತ್ತು ಈ ಭಾಗದ ಪರಿಸರ ಕಾಪಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಆ ಭಾಗದ ವಿವಿಧ ಹಳ್ಳಿಗಳ ಗ್ರಾಮಸ್ಥರು ಪ್ರತಿಭಟಿಸಿ (Protest) ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕ್ರಷರ್‌ಗಳು ರಾತ್ರಿ ವೇಳೆ ಕಾರ್ಯಾಚರಣೆ ಮಾಡುವುದರಿಂದ ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಹೊಸ ಮನೆಗಳೇ ಬಿರುಕು ಬಿಟ್ಟಿವೆ. ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ಅವರ ಸಹಕಾರದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ವೈದ್ಯರು, ಈ ಭಾಗದಲ್ಲಿ ದೂಳು ಹೆಚ್ಚಿರುವ ಕಾರಣ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು. ಈ ಹಿಂದೆ ಕ್ರಷರ್‌ಗಳ ಬಗ್ಗೆ ಮಾತನಾಡಿದರೆ ಮಾಜಿ ಸಚಿವರು ದಲಿತರ ಮೇಲಿನ ದೌರ್ಜನ್ಯ ತಡೆ ಪ್ರಕರಣಗಳನ್ನು ದಾಖಲಿಸಿ ಜನರ ಬಾಯಿ ಮುಚ್ಚಿಸುತ್ತಿದ್ದರು. ನಾವು ಈಗ ಆರೋಗ್ಯ ಶಿಬಿರದಲ್ಲಿ ವೈದ್ಯರು ನೀಡಿರುವ ಪ್ರಮಾಣ ಪತ್ರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಕ್ರಷರ್‌ಗಳನ್ನು ನಿಲ್ಲಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜೋಳದ ರಾಮಕೃಷ್ಣ, ಕುಪೇಂದ್ರ, ನಾರಾಯಣಸ್ವಾಮಿ, ಬಿ.ಮಂಜುನಾಥ್, ನಂದ ಮತ್ತಿತರರು ಪಾಲ್ಗೊಂಡಿದ್ದರು.