ನಗರಸಭೆ ಹರಾಜು : ಸುಮಾರು 20 ಲಕ್ಷ ಆದಾಯ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರಸಭೆ (Muncipality) ವ್ಯಾಪ್ತಿಯ ನೆಲಸುಂಕ ವಸೂಲಿ ಮಾಡುವ ಹಕ್ಕು, ಕೋರ್ಟ್ ಮುಂಭಾಗ ಮತ್ತು ನಕ್ಕಲಕುಂಟೆಯಲ್ಲಿರುವ ಹುಣಸೆಮರಗಳ ಫಸಲಿನ ಹರಾಜು, ವಾರ್ಡ್ ನಂ 20ರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ (ಬಿ.ಬಿ ರಸ್ತೆ) ಶೌಚಾಲಯ ನಿರ್ವಹಣೆ ಮತ್ತು ಶುಲ್ಕ ವಸೂಲಿ ಹಕ್ಕು ಮತ್ತು ಖಾಸಗಿ ಬಸ್ ನಿಲ್ದಾಣದ ವಾಹನ ನಿಲುಗಡೆ ಶುಲ್ಕಕ್ಕೆ ಸಂಬಂಧಿಸಿದಂತೆ ಹರಾಜು ಪ್ರಕ್ರಿಯೆಗಳು (Auction) ಮಂಗಳವಾರ ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಡೆಸಲಾಯಿತು.

ನಗರಸಭೆ ವ್ಯಾಪ್ತಿಯ ನೆಲಸುಂಕ ವಸೂಲಿ ಹಕ್ಕು ₹ 16.40 ಲಕ್ಷಕ್ಕೆ ಹರಾಜು ಆಯಿತು. ಶೌಚಾಲಯ ನಿರ್ವಹಣೆ ಮತ್ತು ಶುಲ್ಕ ವಸೂಲಿ ಹಕ್ಕು ₹ 1.92 ಲಕ್ಷ, ಹುಣಸೇ ಮರಗಳಲ್ಲಿನ ಫಸಲಿನ ಹರಾಜು ₹ 10.01 ಸಾವಿರ ಮತ್ತು ಖಾಸಗಿ ಬಸ್ ನಿಲ್ದಾಣದ ವಾಹನ ನಿಲುಗಡೆ ಶುಲ್ಕ ವಸೂಲಿ ₹ 2.92 ಲಕ್ಷಕ್ಕೆ ಹರಾಜು ಆಯಿತು. ಹರಾಜಿನಲ್ಲಿ ಹಕ್ಕನ್ನು ತಮ್ಮದಾಗಿಸಿಕೊಂಡವರು ಈ ಹಣದ ಜೊತೆಗೆ ಜಿಎಸ್‌ಟಿ ಸಹ ಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಸೇರಿದಂತೆ ನಗರಸಭಾ ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!