Chikkaballapur : ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ (Minister of Revenue excluding Muzrai’ of Karnataka) ಆರ್. ಅಶೋಕ (R. Ashoka) ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ಜೂಲೈ 16 ರಂದು ಗ್ರಾಮ ವಾಸ್ತವ್ಯ (Village stay) ಹೂಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ (Deputy Commissioner) ಆರ್.ಲತಾ ತಿಳಿಸಿದರು.
ಜೂಲೈ 16 ರಂದು ಬೆಳಿಗ್ಗೆ 11ಕ್ಕೆ ಸಚಿವರು ವಿವಿಧ ಇಲಾಖೆಗಳು ಕಾರ್ಯಕ್ರಮದ ಪ್ರಯುಕ್ತ ತೆರೆದಿರುವ ಜಾಗೃತಿ ಮಳಿಗೆಗಳು, ನೋಂದಣಿ ಕೇಂದ್ರಗಳು ,ಕೃಷಿ ಮತ್ತು ತೋಟಗಾರಿಕಾ ವಸ್ತು ಪ್ರದರ್ಶನ ಕೇಂದ್ರ ಹಾಗೂ ವಿವಿಧ ಸವಲತ್ತು ವಿತರಣಾ ಕೇಂದ್ರಗಳನ್ನು ಉದ್ಘಾಟಿಸಿ ನಂತರ ಸರ್ಕಾರದ ವಿವಿಧ ಸವಲತ್ತು ಮತ್ತು ಸೌಲಭ್ಯಗಳನ್ನು ವಿತರಿಸುವ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಮತ್ತು ಸವಲತ್ತು ವಿತರಣೆ ಪತ್ರಗಳನ್ನು ನೀಡಲಿದ್ದಾರೆ. ಸಂಜೆ 5ರಿಂದ 6 ರ ವರೆಗೂ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಸ್ಥಳೀಯ ಕುಂದುಕೊರತೆಗಳನ್ನು ಇತ್ಯರ್ಥಪಡಿಸುವರು. 6 ರಿಂದ 7ರವರೆಗೆ ನಡೆಯುವ ಗ್ರಾಮ ಸಭೆಯಲ್ಲಿ ಭಾಗವಹಿಸಿ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜೂಲೈ 17ರ ಮಧ್ಯಾಹ್ನದವರೆಗೂ ಗ್ರಾಮದಲ್ಲಿದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು .
ಕಂದಾಯ ಸಚಿವರ ಜೊತೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (K. Sudhakar), ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು (M. T. B. Nagaraj) ಹಾಗೂ ಅಧಿಕಾರಿಗಳು ಜರಬಂಡಳ್ಳಿಯಲ್ಲಿ ವಾಸ್ತವ್ಯ ಹೂಡುವರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ತಹಶೀಲ್ದಾರ್ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದರು.