Monday, June 24, 2024
HomeChikkaballapurಜಿಲ್ಲಾಡಳಿತದಿಂದ ಯುವ Covid-19 ಲಸಿಕಾ ಮೇಳ

ಜಿಲ್ಲಾಡಳಿತದಿಂದ ಯುವ Covid-19 ಲಸಿಕಾ ಮೇಳ

- Advertisement -
- Advertisement -
- Advertisement -
- Advertisement -

Chikkaballapur : ಜಿಲ್ಲಾಡಳಿತ ಹಮ್ಮಿಕೊಂಡಿದ್ದ 15 ರಿಂದ 18 ವರ್ಷದೊಳಗಿನ ಮಕ್ಕಳ ಯುವ Covid-19 ಲಸಿಕಾ ಮೇಳವನ್ನು (Yuva Vaccination Mela) ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ (Government Junior College, Chikkaballapur) ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು “15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕೀಕರಣದಲ್ಲಿ ಜಿಲ್ಲೆಯಲ್ಲಿ ಮಂಗಳವಾರದವರೆಗೆ ಮೊದಲ ದಿನ 7,851 ಮಕ್ಕಳಿಗೆ ಹಾಗೂ ಎರಡನೇ ದಿನ 13,904 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ 33ರಷ್ಟು ಗುರಿಸಾಧನೆ ಮಾಡಲಾಗಿದೆ. ಜಿಲ್ಲಾಡಳಿತದ ಈ ಉತ್ತಮ ಸಾಧನಕ್ಕೆ ಅಭಿನಂದನೆಗಳು. ‌‌‌ವಿದೇಶಗಳಿಂದ ಮತ್ತು ಹೊರರಾಜ್ಯಗಳಿಂದ ಜನರು ನೇರವಾಗಿ ಬೆಂಗಳೂರಿಗೆ ಬರುವುದರಿಂದ Omicron ವೇಗವಾಗಿ ಹರಡುತ್ತಿದ್ದು, ಹೆಚ್ಚು ಪ್ರಕರಣಗಳು ರಾಜಾಧಾನಿಯಲ್ಲಿ ವರದಿಯಾಗಿವೆ. ಆದ್ದರಿಂದಲೇ ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು (SOP) ಬಿಡುಗಡೆ ಮಾಡಲಾಗಿದೆ. ಮಕ್ಕಳ ಸುರಕ್ಷೆ ಮತ್ತು ಭವಿಷ್ಯದ ದೃಷ್ಟಿಯಿಂದ ಉತ್ತಮ ಆರೋಗ್ಯಕ್ಕೆ ಒತ್ತು ನೀಡಬೇಕಾಗಿದ್ದು ಈ ವಿಚಾರದಲ್ಲಿ ಶಿಕ್ಷಕರ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಲತಾ (Deputy Commissioner Smt R. Latha), ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಕಬಾಡೆ (Dr. Indira Kabade), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ (ZP CEO P. Shivashankar) , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ (Superintendent of Police G. K. Mithun Kumar), ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, , ತಹಶೀಲ್ದಾರ್ ಗಣಪತಿಶಾಸ್ತ್ರಿ (Tehsildar Ganapathy Shastri) ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!