29.6 C
Bengaluru
Sunday, March 1, 2026

ಈಶ ಯೋಗ ಕೇಂದ್ರದಲ್ಲಿ ನಾಗರ ಪಂಚಮಿ 

- Advertisement -
- Advertisement -

Chikkaballapur : ನಾಗರ ಪಂಚಮಿ (Nagara Panchami) ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶ ಯೋಗ ಕೇಂದ್ರದಲ್ಲಿ (Isha Foundation) ಸೋಮವಾರ ನಾಗಾರಾಧನೆ (Nagaradahane) ಕಾರ್ಯಕ್ರಮವನ್ನು ಸಂಜೆ ಆರು ಗಂಟೆ ಸುಮಾರಿಗೆ ನಾಗ ಮಂಟಪದಲ್ಲಿ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಅವರು ನಾಗನ ಪ್ರತಿಮೆಗೆ ಆರತಿ ಅರ್ಪಿಸುವ ಮೂಲಕ ನಾಗಾರಾಧನೆ ಪ್ರಕ್ರಿಯೆ ಆರಂಭಿಸಿದರು.

ನಾಗಾರಾಧನೆಯ ಪೂಜೆಗಳನ್ನು ಉಡುಪಿಯ ನಾಗಪಾತ್ರಿಗಳು ವಿಧಿವತ್ತಾಗಿ ನಡೆಸಿದರು. ಬೆಳಿಗ್ಗೆ ಸರ್ಪ ದೋಷ ನಿವಾರಣೆಗಾಗಿ ಆಶ್ಲೇಷಬಲಿ ಪೂಜೆ ಮತ್ತು ‘ನಾಗಮಂಡಲ’ ಎಂಬ ಸಾಂಪ್ರದಾಯಿಕ ನೃತ್ಯ ಸಹ ನಡೆಯಿತು. ಇಲ್ಲಿನ ಯೋಗೇಶ್ವರ ಲಿಂಗಕ್ಕೆ ಭಕ್ತರು ಹಾಲಿನ ಅಭಿಷೇಕ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಎಸ್.ಮುನಿಸ್ವಾಮಿ, ಉಮೇಶ್ ಜಾಧವ್, ಸಚಿವರಾದ ಡಾ.ಎಂ.ಸಿ.ಸುಧಾಕರ್, ಕೆ.ಎಚ್.ಮುನಿಯಪ್ಪ, ಶಾಸಕ ಪ್ರದೀಪ್ ಈಶ್ವರ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಪ್ರೇಮಾ ಕೃಷ್ಣ ಸೇರಿದಂತೆ ಉನ್ನತ ಅಧಿಕಾರಿಗಳು, ರಾಜಕೀಯ ಮುಖಂಡರು, ಚಿತ್ರನಟರು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಭಕ್ತರು ಮತ್ತು ಈಶ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!