Chintamani : BESCOM ವಿದ್ಯುತ್ ಸರಬರಾಜು ಕಂಪನಿ ಚಿಂತಾಮಣಿ ನಗರದ ಉಪಕೇಂದ್ರದಿಂದ ಕೋಲಾರ ರಸ್ತೆಯ AB Cable ವಾಹಕವನ್ನು ಬಿಚ್ಚಿ ಎಳೆಯುವ ಕಾಮಗಾರಿ ಜನವರಿ 23 ರಿಂದ 25 ರವರೆಗೆ ಕೈಗೊಳ್ಳಲು ತೀರ್ಮಾನಿಸಿದೆ.
ಸೊಣ್ಣಶೆಟ್ಟಹಳ್ಳಿ, ಕೋಲಾರ ರಸ್ತೆ, ಚೌಡರೆಡ್ಡಿ ಪಾಳ್ಯ, ಗದ್ವಾಲ್ ಪೇಟೆ, ಇಡ್ಲಿಪಾಳ್ಯ, ಟಿಪ್ಪುನಗರ, ಅಜಾದ್‌ಚೌಕ, ದೊಡ್ಡಪೇಟೆ, ಅಗ್ರಹಾರ, ಹಳೇಪೇಟೆ, ಹೂವಿನ ಪೇಟೆ, ಜೆ.ಜೆ.ಕಾಲೋನಿ, ಬುಕ್ಕನಹಳ್ಳಿ ರಸ್ತೆ, ವಿನೋಭ ಕಾಲೋನಿ, ಪ್ರೇಮನಗರ, ಕರಿಯಪ್ಪಲ್ಲಿ, ಗಾಂಧಿನಗರ, ಎಪಿಎಂಸಿ ಮಾರುಕಟ್ಟೆ, ವಾಯುಪುತ್ರನಗರ, ಚೇಳೂರು ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಜನವರಿ 23 ರ ಗುರುವಾರದಿಂದ 25ರ ಶನಿವಾದವರೆಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಗ್ರಾಹಕರು ಸಹಕಾರ ನೀಡಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಜಿ.ಶಿವಶಂಕರ್ ತಿಳಿಸಿದ್ದಾರೆ.