Home News Chintamani ಕೃಷಿ ವಿಜ್ಞಾನದಲ್ಲಿ ಚಿನ್ನದ ಪದಕ ಪಡೆದ ಗ್ರಾಮೀಣ ವಿದ್ಯಾರ್ಥಿನಿ

ಕೃಷಿ ವಿಜ್ಞಾನದಲ್ಲಿ ಚಿನ್ನದ ಪದಕ ಪಡೆದ ಗ್ರಾಮೀಣ ವಿದ್ಯಾರ್ಥಿನಿ

0
436
Karnataka Governor Thawar Chand Gehlot Issue Gold medals for Chintamani Bindu sri at University of Agricultural Sciences, Bangalore Convocation

Chintamani : ಚಿಂತಾಮಣಿ ತಾಲ್ಲೂಕಿನ ಕೈವಾರ (Kaiwara) ಹೋಬಳಿ ಜಂಗಮಸೀಗೆಹಳ್ಳಿ ಗ್ರಾಮದ ಜೆ.ಡಿ.ಬಿಂದುಶ್ರೀ (J D BinduSri) ರವರು ಕೃಷಿ ವಿಜ್ಞಾನ(ಆನರ್ಸ್) ಬ್ಯಾಚುಲರ್ ಪದವಿಯಲ್ಲಿ 2021-22ನೇ ಸಾಲಿನಲ್ಲಿ 10 ಅಂಕಗಳಿಗೆ 9.02 ಅಂಕ ಗಳಿಸಿದ್ದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ (University of Agricultural Sciences, Bangalore) 57ನೇ ಘಟಿಕೋತ್ಸವದಲ್ಲಿ (Convocation) ಎರಡು ಚಿನ್ನದ ಪದಕಗಳನ್ನು (Gold Medal) ಪಡೆದಿದ್ದಾರೆ.

ಇತ್ತೀಚೆಗೆ ನಡೆದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ 57ನೇ ಘಟಿಕೋತ್ಸವದಲ್ಲಿ ದಿವಂಗತ ಡಾ.ಕಿರಣ್ ಆರ್ ಪಟೇಲ್ ಅವರ ಸ್ಮರಣಾರ್ಥ ಚಿನ್ನದ ಪದಕವನ್ನು ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ (Thawar Chand Gehlot) ಜೆ.ಡಿ.ಬಿಂದುಶ್ರೀ ರವರಿಗೆ ಪ್ರದಾನ ಮಾಡಿದರು.

,ದೆಹಲಿಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಡಾ. ಹಿಮಾಂಶು ಪಾಠಕ್, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮತ್ತು ಕೃಷಿ ವಿವಿಯ ಕುಲಪತಿ ಡಾ.ಎಸ್.ವಿ.ಸುರೇಶ್ ಸಮಾರಂಭದಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!