ರಸ್ತೆ ಅಪಘಾತ: 9 ಮಂದಿಗೆ ಗಂಭೀರ ಗಾಯ

- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಸಮೀಪ ಸೋಮವಾರ ದ್ವಿಚಕ್ರ ವಾಹನಕ್ಕೆ (Two Wheeler) ಬೊಲೆರೊ (Bolero) ವಾಹನ ಡಿಕ್ಕಿ (Accident) ಹೊಡೆದ ಪರಿಣಾಮ 9 ಮಂದಿ ಗಾಯಗೊಂಡಿದ್ದು ಗಂಭೀರವಾಗಿ ಗಾಯಗೊಂಡ ಮೂವರನ್ನು ಕೋಲಾರದ SNR ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಂತಾಮಣಿ ತಾಲ್ಲೂಕಿನ ದೊಡ್ಡಹಳ್ಳಿಯ ನರೇಂದ್ರ ಎಂಬಾತ ದ್ವಿಚಕ್ರ ವಾಹನದಲ್ಲಿ ಚೇಳೂರು ಕಡೆಯಿಂದ ಬರುತ್ತಿದ್ದು ಮಲಕಲಚೆರವು ಹತ್ತಿರ ಕೊತ್ತಂಬರಿ ಸೊಪ್ಪು ಮತ್ತು ಕ್ಯಾರೆಟ್ ಕೀಳಲು ಕೆಂಚಾರ್ಲಹಳ್ಳಿಯ ಕೂಲಿ ಕಾರ್ಮಿಕರನ್ನು ಪ್ರತಿ ದಿನ ವಾಹನದಲ್ಲಿ ಕರೆದುಕೊಂಡು ಹೋಗಿ ಸಂಜೆ ವಾಪಸ್ ಮನೆಗೆ ಕರೆತರಲಾಗುತ್ತಿದ್ದ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೊಲೆರೊ ವಾಹನದಲ್ಲಿದ್ದ ವೆಂಕಟಮ್ಮ, ಗೌತಮಿ, ರಾಮಕ್ಕ, ವೆಂಕಟಮ್ಮ, ವೆಂಕಟಲಕ್ಷ್ಮಮ್ಮ, ಪ್ರಭಾವತಮ್ಮ, ನಾರೆಮ್ಮ, ಸುಬ್ಬಕ್ಕರಿಗೆ ಗಾಯಗಳಾಗಿವೆ.

ಈ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಕೆಂಚಾರ್ಲಹಳ್ಳಿ ಪೊಲೀಸರು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಸಂಭವಿಸುತ್ತಿದ್ದಂತೆ ಬೊಲೆರೊ ವಾಹನದ ಚಾಲಕ ಪರಾರಿಯಾಗಿದ್ದಾನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!