Home Chintamani ಬೈಕ್‌ಗೆ ಜೀಪ್‌ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

ಬೈಕ್‌ಗೆ ಜೀಪ್‌ ಡಿಕ್ಕಿ: ಸ್ಥಳದಲ್ಲೇ ಮಹಿಳೆ ಸಾವು

0
3
Chintamani Dandupalya Jeep Bike Accident

Chintamani : ಚಿಂತಾಮಣಿ-ಮದನಪಲ್ಲಿ ರಸ್ತೆಯ ದಂಡುಪಾಳ್ಯ (Dandupalya) ಗೇಟ್ ಬಳಿ ಬುಧವಾರ ಜೀಪ್‌ ಮತ್ತು ದ್ವಿಚಕ್ರವಾಹನದ ನಡುವೆ (Jeep Bike Accident) ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟು ಒಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಮುರುಗಮಲ್ಲದ ತರನ್ನುಂ(22) ಎಂದು ಗುರುತಿಸಲಾಗಿದ್ದು ಇವರ ಪತಿ ಆಯಾಜ್ ಗಾಯಗೊಂಡವರು. ಜೀಪ್‌ನಲ್ಲಿದ್ದ ಆಂಧ್ರಪ್ರದೇಶದ ಕದರಿ ಪಟ್ಟಣದ ಫಕ್ರದ್ದೀನ್, ಅಜಾದ್, ಜಬೀನಾ, ಹಮೀದ್, ಶೋಯಬ್, ಸಲೀಂ, ಶಕೀರಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುರುಗಮಲ್ಲದಿಂದ ಆಯಾಜ್ ಮತ್ತು ತರನ್ನುಂ ದ್ವಿಚಕ್ರವಾಹನದಲ್ಲಿ ಬೇತಮಂಗಲ ಕಡೆಗೆ ಹೋಗುತ್ತಿದ್ದರು. ಆಂಧ್ರಪ್ರದೇಶದ ಕದಿರಿಯಿಂದ ಜೀಪ್‌ನಲ್ಲಿ ಚಿಂತಾಮಣಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದಾರೆ.

ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರವಾಹನ ಸವಾರ ಆಯಾಜ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!