Chintamani : ಚಿಂತಾಮಣಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆ ವಾಹನ ಚಾಲಕರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ (Divers Workshop) ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಮುರಳೀಧರ್ ” ಬಹಳಷ್ಟು ಜನರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದರಲ್ಲಿ ಹಿಂದುಳಿದಿದ್ದು ಅವರ ಬೇಜವಾಬ್ದಾರಿಯಿಂದಲೇ ಅಪಘಾತಗಳು ಸಂಭವಿಸುತ್ತಿವೆ. ಜುಲೈ 1ರಿಂದ ನೂತನ ಚಾಲನಾ ನಿಯಮ ಜಾರಿಗೆ ಬರುತ್ತವೆ. ನಿಯಮ ಉಲ್ಲಂಘಿಸಿದರೆ ದಂಡ ಹೆಚ್ಚಾಗಿರುತ್ತದೆ. ಕುಡಿದು ಮತ್ತು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲಾಯಿಸುವುದು. ದ್ವಿಚಕ್ರವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿನ ಜನ ಪ್ರಯಾಣಿಸುವುದು, ಅಪ್ರಾಪ್ತ ವಯಸ್ಸಿನ ಬಾಲಕರು ವಾಹನಗಳ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ವಾಹನವನ್ನು ಮನೆಯಿಂದ ಹೊರಗೆ ತೆಗೆಯಬೇಕಾದರೆ ಚಾಲನಾ ಪರವಾನಗಿ, ವಾಹನದ ಆರ್‌ಸಿ, ವಿಮೆ ಮತ್ತಿತರ ಎಲ್ಲ ದಾಖಲೆ ಹೊಂದಿರಬೇಕು. ದಾಖಲೆಗಳು ಇಲ್ಲದಿದ್ದರೂ ದಂಡ ವಿಧಿಸಲಾಗುವುದು. ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಐಎಂವಿ ಕಾಯ್ದೆಯಡಿ ದೂರು ದಾಖಲಿಸಲಾಗುವುದು” ಎಂದು ಎಚ್ಚರಿಸಿದರು.
ನಗರಠಾಣೆ ಇನ್ಸ್‌ಸ್ಪೆಕ್ಟರ್ ವಿಜಿಕುಮಾರ್, ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವಕುಮಾರ್, ಆಟೊ, ಟೆಂಪೊ ಮತ್ತಿತರ ವಾಹನಗಳ ಚಾಲಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.