Chintamani : ಚಿಂತಾಮಣಿ ನಗರದ ಕೋಲಾರ ರಸ್ತೆಯಲ್ಲಿರುವ ಕರ್ನಾಟಕ ಫರ್ನೀಚರ್ ಅಂಗಡಿಯ ಮುಂದೆ 2021ರ ಅಕ್ಟೋಬರ್ 25ರಂದು ರಾತ್ರಿ 70 ವರ್ಷದ ವೃದ್ಧೆಯ (elderly woman) ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿ ಚಿನ್ನಗಾನಪಲ್ಲಿ ಗ್ರಾಮದ ನಾಗರಾಜ್‌ಗೆ ಜೀವಾವಧಿ ಶಿಕ್ಷೆ (life sentence) ಮತ್ತು ₹50,000 ದಂಡ ವಿಧಿಸಲಾಗಿದೆ.

ನಗರದ ತಪತೇಶ್ವರ ಕಾಲೋನಿಯ ಲಕ್ಷ್ಮಮ್ಮ ಎಂಬ ವೃದ್ಧೆ ಕೊಲೆಯಾದವರು. ಆಕೆಯ ಮಗ ನರಸಿಂಹ ನಗರದ ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿ ಪತ್ತೆ ಮಾಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಆಗಿನ ಪೋಲಿಸ್ ಇನ್‌ಸ್ಪೆಕ್ಟರ್ ರಂಗಶಾಮಯ್ಯ ಅವರು ತನಿಖೆ ನಡೆಸಿ, ಆರೋಪಿ ನಾಗರಾಜ್‌ನ್ನು ಬಂಧಿಸಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿ ಬುಧವಾರ ತೀರ್ಪು ಹೊರತಂದಿದೆ (court verdict).
ಶಾಂತಿ ಸುಮತಿ ಮೇರಿ ಅವರು ಸರ್ಕಾರಿ ವಾದಗಾರರಾಗಿ ವಾದ ಮಂಡಿಸಿದ್ದರು. ಸುನೀತ ಅವರು ಸಹಾಯಕ ತನಿಖಾಧಿಕಾರಿಯಾಗಿದ್ದರು.