Chintamani : ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸಿಲಿಂಡರ್ (Fuel Gas Cylinder) ಸ್ಫೋಟಗೊಂಡ ಘಟನೆ ಚಿಂತಾಮಣಿಯ ಚೇಳೂರು ರಸ್ತೆಯ ವಾಟರ್ ಟ್ಯಾಂಕ್ ಬಳಿ ಗುರುವಾರ ರಾತ್ರಿ ನಡೆದಿದೆ. ಬೆಂಕಿ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶ್ರೀರಾಮನಗರದ ಬಡಾವಣೆಯ ನಿವಾಸಿ ಶಾಂತಮ್ಮ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿ ಇದಾಗಿದ್ದು, ಬೀಡಿ, ಸಿಗರೇಟ್ , ಟೀ ಮಾರಾಟ ಮಾಡುತ್ತಿದ್ದುದರಿಂದ ಅಂಗಡಿಯಲ್ಲಿ ಸಿಲಿಂಡರ್ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ರಾತ್ರಿ 10 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂದ್ದು, ಬೆಂಕಿಯ ಜ್ವಾಲೆಯಿಂದಾಗಿ ಸಿಲಿಂಡರ್ ಸಹ ಸ್ಫೋಟಿಸಿದೆ. ಆ ಸಮಯದಲ್ಲಿ ಯಾರೂ ಸಹ ಅಂಗಡಿಯಲ್ಲಿ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.