Chintamani : ಚಿಂತಾಮಣಿ ವಾರ್ಡ್ ನಂ. 16ರ ಗಾಂಧಿನಗರದಲ್ಲಿರುವ ಗೌಸೇ ಪಾಕ್ ನಶಾನ್ (Gouse Pak Nashan) ಹಾಗೂ ಖಾಜಾ ಗರೀಬ್ ನಶಾನ್ (Khaja Garib Nashan) ಗಂಧೋತ್ಸವ (Gandhotsava) ಶನಿವಾರ ರಾತ್ರಿ ಸಡಗರದೊಂದಿಗೆ ನಡೆಯಿತು.
ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಗಂಧೋತ್ಸವದ ಮೆರವಣಿಗೆಗೆ ಸಾಂಸ್ಕೃತಿಕ ತಂಡಗಳು ಸಾಥ್ ನೀಡಿದವು. ಮೆರವಣಿಗೆಯು ನಶಾನ್ ಬಳಿ ಆಗಮಿಸಿದಾಗ ಗಂಧ ಮತ್ತು ಚಾದರ್ಸಮರ್ಪಿಸಲಾಯಿತು. ನಶಾನ್‌ಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು. ಆಗಮಿಸಿದ್ದ ಭಕ್ತರಿಗೆ ಊಟ ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.. ಪ್ರಸಿದ್ಧ ಕಲಾವಿದರಿಂದ ಕವಾಲಿ ಕಾರ್ಯಕ್ರಮವೂ ನಡೆಯಿತು.
ಈ ಸಮಾರಂಭದಲ್ಲಿ ಮಹಬೂಬ್ ಪೀರ್ ಅಸ್ಲಾಂ, ಖಯ್ಯೂಮ್, ಶಬ್ಬೀರ್, ಆಪ್ಜಲ್, ಅಕ್ಮಲ್, ಖಾದರ್ ಬಾಷಾ, ಸಲ್ಲು, ಶಹೀಂಷಾ, ಕಲಂದರ್ ಮತ್ತು ಅಯಾಜ್ ಭಾಗವಹಿಸಿದರು.