Chintamani : ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಚಿಂತಾಮಣಿ ನಗರ ಮತ್ತು ತಾಲ್ಲೂಕಿನಾದ್ಯಂತ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ (Illegal liquor Shops) ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ (Deputy Commissioner) ಆರ್ ಲತಾ ಅವರಿಗೆ ಚಿಂತಾಮಣಿಯಲ್ಲಿ ಮನವಿ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಜೆ.ವಿ.ರಘುನಾಥರೆಡ್ಡಿ “ಹಳ್ಳಿ ಹಳ್ಳಿಯಲ್ಲೂ ರಾಜಾರೋಷವಾಗಿ ಚಿಲ್ಲರೆ ವ್ಯಾಪಾರದಂತೆ ಮದ್ಯ ಮಾರಾಟ ಕೂಡ ನಡೆಯುತ್ತಿದ್ದು ಇದರಿಂದ ಹಲವು ಮನೆಗಳಲ್ಲಿ ಪ್ರತಿನಿತ್ಯ ಜಗಳ, ಕಲಹ ನಡೆದು ಕುಟುಂಬಗಳು ಬೀದಿಪಾಲಾಗುತ್ತಿವೆ. ರೈತರ ‘ಪಿ’ ನಂಬರ್ ದುರಸ್ಥಿ ಅರ್ಜಿಗಳು ವರ್ಷಗಳಿಂದ ಬಾಕಿ ಇದ್ದು ಇವುಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ನೀಡಬೇಕು. ಈ ಬಗ್ಗೆ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಆಗುತ್ತಿಲ್ಲ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.