Chintamani : ಚಿಂತಾಮಣಿ ತಾಲ್ಲೂಕಿನ ಕೈವಾರದ KPS ಶಾಲೆಯಲ್ಲಿ (KPS SChool, Kaiwara) ಶನಿವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ (Dr MC Sudhakar) ಹೊಸ ಕೊಠಡಿಗಳನ್ನು ಉದ್ಘಾಟಿಸಿ (New Rooms Inauguration) ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಪಾಠ ಮಾಡಿದರು.
ಈ ಸಂದರ್ಭದಲ್ಲಿ students talk in english within school premises ಎಂದು ಮಾತು ಆರಂಭಿಸಿದ ಸಚಿವರು “ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಮತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುತ್ತಿದೆ. ಶಿಕ್ಷಕರು ಬದಲಾವಣೆಗೆ ತಕ್ಕಂತೆ ಆಪ್‌ಡೇಟ್ ಆಗಿ ನೂತನ ತಂತ್ರಜ್ಞಾನದ ಮೂಲಕ ಬೋಧನೆ ಮಾಡಬೇಕು. ಗೋ, ಇನ್, ಯೆಸ್, ನೋ ಇನ್ನೂ ಅನೇಕ ಇಂಗ್ಲೀಷ್ ಪದಗಳನ್ನು ಬಳಸಿಕೊಂಡು ಮಕ್ಕಳು ಇಂಗ್ಲೀಷ್‌ನಲ್ಲೇ ಮಾತನಾಡಲು ಕಲಿಯಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ಯಾದವ, ತಾಲ್ಲೂಕು ಪಂಚಾಯಿತಿ ಇ. ಒ. ಆನಂದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿ ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಬಿಸಿಯೂಟ ಅಧಿಕಾರಿ ಸುರೇಶ್, ಕೈವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾದೇವಿ, ಸದಸ್ಯರಾದ ಮಂಜುನಾಥ್ ರೆಡ್ಡಿ, ಆನಂದ್, ಬಾಬು, ಗಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.