Chintamani : ಚಿಂತಾಮಣಿ ನಗರದ ನೌಕರರ ಭವನದಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಡಿ ರಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆಯಲ್ಲಿ ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಎನ್.ವಿ.ಶ್ರೀನಿವಾಸನ್ (KaSaPa President) ರವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿರೆಡ್ಡಿ, ಆರ್.ಅಶೋಕಕುಮಾರ್, ಕೆ.ರವಣಪ್ಪ, ಕೆ.ಎಂ.ಸಿದ್ದಪ್ಪ, ಕಾಗತಿ ವೆಂಕಟರತ್ನಂ, ಲೀಲಾ ಲಕ್ಷ್ಮಿನಾರಾಯಣ್, ಚೆನ್ನಮಲ್ಲಿಕಾರ್ಜುನಯ್ಯ, ಯಲುವಳ್ಳಿ ಸೊಣ್ಣೇಗೌಡ, ಚಂದ್ರಶೇಖರ್, ಮುನಿನಾರಾಯಣಪ್ಪ, ಸಿ.ಮಂಜುನಾಥ್, ಆರ್.ಮಂಜುನಾಥ್, ಶಿಕ್ಷಕ ವೆಂಕಟೇಶ್ವರರಾವ್ ಮತ್ತಿತರರು ಉಪಸ್ಥಿತರಿದ್ದರು.